ಹೈದರಾಬಾದ್: 5 ಲಕ್ಷ ಮೌಲ್ಯದ ಕೊಕೇನ್ (Cocaine) ಖರೀದಿಸುವ ವೇಳೆ ಹೈದರಾಬಾದ್ ಆಸ್ಪತ್ರೆಯೊಂದರ ಸಿಇಓ (Hyderabad Hospital CEO) ರೆಡ್‌ಹ್ಯಾಂಡಾಗಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
34 ವರ್ಷದ ನಮ್ರತಾ ಚಿಗುರುಪತಿ ಸಿಕ್ಕಿ ಬಿದ್ದ ಆಸ್ಪತ್ರೆ ಸಿಇಓ. ಮುಂಬೈ ಮೂಲದ ಡೀಲರ್ (Mumbai-based supplier) ವಂಶ್ ಧಕ್ಕರ್ ಕಳುಹಿಸಿದ್ದ ಕೊರಿಯರ್ ಮೂಲಕ ಕೊಕೇನ್ ಪಡೆಯುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಡೀಲರ್ ಧಕ್ಕರ್ ಆಪ್ತ ಬಾಲಕೃಷ್ಣ ಜೊತೆಗೆ ನಮ್ರತಾಳನ್ನೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ದೇಹದಲ್ಲಿ ಒಂದು ತೊಟ್ಟು ರಕ್ತ ಇರೋವರೆಗೂ ಯುದ್ಧ ಮಾಡ್ತೀನಿ – ಮೈ ಪರಚಿಕೊಂಡ ಪಾಕ್ ಪ್ರಧಾನಿ
ವಾಟ್ಸಪ್‌ನಲ್ಲೇ ಕುದುರಿತ್ತು ಡೀಲ್:
ಹೈದರಾಬಾದ್ ಆಸ್ಪತ್ರೆಯೊಂದರ ಸಿಇಓ ಆಗಿರುವ ನಮ್ರತಾ ಧಕ್ಕರ್‌ನನ್ನ ವಾಟ್ಸಪ್ ಮೂಲಕ ಸಂಪರ್ಕಿಸಿ 5 ಲಕ್ಷ ರೂ.ಗೆ ಕೊಕೇನ್ ಆರ್ಡರ್ ಮಾಡಿದ್ದಳು. ಆನ್‌ಲೈನ್‌ನಲ್ಲಿ ಹಣ ಕೂಡ ವರ್ಗಾವಣೆ ಮಾಡಿದ್ದಳು. ಬಳಿಕ ಧಕ್ಕರ್ ಆಪ್ತ ಬಾಲಕೃಷ್ಣ ಎಂಬ ವ್ಯಕ್ತಿ ಮೂಲಕ ಡ್ರಗ್ಸ್ ಡೀಲ್ ಮಾಡಲು ಹೇಳಿದ್ದ. ನಂತರ ಬಾಲಕೃಷ್ಣ ಡ್ರಗ್ಸ್ ಕೊಡೋದಕ್ಕಾಗಿ ರಾಯದುರ್ಗಂಗೆ ಬಂದಾಗ ಪೊಲೀಸರು ಇಬ್ಬರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ವೆಂಕಣ್ಣ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪಾಕ್‌ನ ಶೆಲ್ ತುಣುಕು ಅಮ್ಮನ ಮುಖವನ್ನೇ ಸೀಳಿತು – ʻಪಬ್ಲಿಕ್ ಟಿವಿʼ ಬಳಿ ಬಾರಾಮುಲ್ಲಾ ಜನರ ಅಳಲು
ಬಂಧಿತರಿಂದ 10,000 ರೂ. ನಗದು, 53 ಗ್ರಾಂ ಕೊಕೇನ್ ಹಾಗೂ 2 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಅಲ್ಲದೇ ಪ್ರಾಥಮಿಕ ವಿಚಾರಣೆಯಲ್ಲಿ ನಮ್ರತಾ ಡ್ರಗ್ಸ್‌ಗಾಗಿ ಸುಮಾರು 70 ಲಕ್ಷ ರೂ. ಖರ್ಚುಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ʻರಾಕಿ ಭಾಯ್ʼ ಫ್ಯಾನ್ಸ್‌ಗೆ ಗುಡ್‌ನ್ಯೂಸ್; KGF-3 ಬಗ್ಗೆ ಬಿಗ್ ಹಿಂಟ್ ಕೊಟ್ಟ ಹೊಂಬಾಳೆ ಫಿಲ್ಮ್ಸ್