ಹೈದರಾಬಾದ್: ಮುತ್ತಿನನಗರಿ ಹೈದರಾಬಾದ್‍ನ ಯುವತಿಯೊಬ್ಬರು ವಿಶಿಷ್ಟ ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ. ಇಲ್ಲಿನ 18 ವರ್ಷದ ಜಾಹ್ನವಿ ಮಗಂಟಿ ಕಾಲಿನಿಂದಲೇ ವಿಶ್ವದ ಬೃಹತ್ ಪೇಂಟಿಂಗ್ ಮಾಡಿದ್ದಾರೆ. ಈ ಮೂಲಕ ಗಿನ್ನಿಸ್ ದಾಖಲೆ ಪುಟ ಸೇರಲು ಯತ್ನಿಸಿದ್ದಾರೆ.
ಇದುವರೆಗೂ ವೈಕ್ತಿಕವಾಗಿ ಕಾಲಿನಿಂದ ಮಾಡಿದ 100 ಚದರ ಮೀಟರ್ ಪೇಂಟಿಂಗ್ ಗಿನ್ನಿಸ್ ದಾಖಲೆಯ ಪುಟ ಸೇರಿದೆ. ಆದರೆ ಜಾಹ್ನವಿ ಅವರು 140 ಚದರ ಮೀಟರ್ ಪೇಂಟಿಂಗ್ ಮಾಡುವ ಮೂಲಕ ಈ ದಾಖಲೆಯನ್ನ ಮುರಿದಿದ್ದಾರೆ.
Advertisement
Advertisement
ನಗರದ ಗಚ್ಚಿಬೌಲಿಯ ಕ್ಲಬ್ ಹೌಸ್‍ನಲ್ಲಿ ಶುಕ್ರವಾರ ವಿಶ್ವ ದಾಖಲೆಯ 140 ಚದರ ಮೀಟರ್ ಪೇಂಟಿಂಗ್ ಬಿಡಿಸಿದ್ದಾರೆ. ಗಿನ್ನಿಸ್ ರೆಕಾರ್ಡ್ ಪ್ರತಿನಿಧಿಗಳ ಮುಂದೆ ಜಾಹ್ನವಿ ಪೇಂಟಿಂಗ್ ಮಾಡಿದ್ದಾರೆ. ಕಾಲಿನಿಂದ ಬಣ್ಣಗಳ ಅದ್ಭುತ ಚಿತ್ರವನ್ನು ಬಿಡಿಸಿದ್ದಾರೆ.
Advertisement
ಬಿಟ್ರನ್ ನ ವಾರ್ವಿಕ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿರುವ ಜಾಹ್ನವಿ ಅವರು ಪೇಂಟಿಂಗ್‍ನಲ್ಲಿ ಮಾತ್ರವಲ್ಲದೇ, ನೃತ್ಯ, ಸಂಗೀತದಲ್ಲೂ ಪರಿಣಿತಿ ಹೊಂದಿದ್ದಾರೆ. ಡ್ಯಾನ್ಸ್ ಮಾಡುತ್ತಾ ಪೇಂಟಿಂಗ್ ಮಾಡುವುದರಲ್ಲೂ ಜಾಹ್ನವಿ ಸೈ ಎನಿಸಿಕೊಂಡಿದ್ದಾರೆ. ಅಲ್ಲದೇ ಕ್ರೀಡೆಯಲ್ಲೂ ಮುಂದಿರುವ ಇವರು ರಾಷ್ಟ್ರೀಯ ತಂಡದ ಬ್ಯಾಸ್ಕೆಟ್ ಬಾಲ್ ಪ್ಲೇಯರ್ ಆಗಿದ್ದಾರೆ. ಇತ್ತೀಚೆಗೆ ಜಾಹ್ನವಿ ಅವರು ನೃತ್ಯ ಮಾಡುತ್ತಾ ಕಮಲ ಹಾಗೂ ನವಿಲುಗರಿಯ ಚಿತ್ರವನ್ನು ಬಿಡಿಸಿದ್ದಾರೆ.