ಹೈದರಾಬಾದ್: ಹೈದರಾಬಾದ್ ಮೂಲದ ಗ್ರೀನ್ ರೊಬೊಟಿಕ್ಸ್ ಸಂಸ್ಥೆಯು (Robotics Firm) ಕೃತಕ ಬುದ್ಧಿಮತ್ತೆಯಿಂದ ಕಾರ್ಯಾಚರಣೆ ನಡೆಸಲ್ಪಡುವ ಅತ್ಯಾಧುನಿಕ ಸ್ವಾಯತ್ತ ಆ್ಯಂಟಿ ಡ್ರೋನ್ ವ್ಯವಸ್ಥೆಯನ್ನ (Anti Drone System) ಅನಾವರಣಗೊಳಿಸಿದೆ. ಇದಕ್ಕೆ ʻಇಂದ್ರಜಾಲ್ʼಎಂದು ಹೆಸರಿಡಲಾಗಿದ್ದು, ವಿಶಾಲ ಪ್ರದೇಶವನ್ನು ರಕ್ಷಿಸುತ್ತದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಇಂತಹ ಅತ್ಯಾಧುನಿಕ ಡ್ರೋನ್ ಅಭಿವೃದ್ಧಿಪಡಿಸಲಾಗಿದೆ.
Advertisement
ಡೀಪ್ ಟೆಕ್ ಕಂಪನಿಯ ಭಾಗವಾದ ಗ್ರೀನ್ ರೊಬೊಟಿಕ್ಸ್ (Robotics) ಹೈದರಾಬಾದ್ ಹೊರ ವಲಯದಲ್ಲಿ ಈ ಸುಧಾರಿತ ಡ್ರೋನ್‌ನ ಸಾಮರ್ಥ್ಯ ಪರೀಕ್ಷೆ ನಡೆಸಿದೆ. ಇದು ರಕ್ಷಣಾ ವಲಯ, ಉದ್ಯಮ ಹಾಗೂ ಸರ್ಕಾರಿ ವಲಯಗಳಿಗೆ ಕೃತಕ ಬುದ್ಧಿಮತ್ತೆ ಚಾಲಿತ ಭದ್ರತಾ ಪರಿಹಾರ ಕ್ರಮಗಳನ್ನ ಸೂಚಿಸಲಿದೆ. ಮುಖ್ಯವಾಗಿ ʻಇಂದ್ರಜಾಲ್ʼ (Indrajaal) ವಿಶಾಲ ಪ್ರದೇಶವನ್ನ ರಕ್ಷಿಸುವ ಏಕೈಕ ಡ್ರೋನ್ ವ್ಯವಸ್ಥೆಯಾಗಿದೆ. ಸೇನೆಗಳು ನಿಭಾಯಿಸಲಾಗದ ಶತ್ರು ಸೇನೆಯ ಬೆದರಿಕೆಗಳ ವಿರುದ್ಧ ಇದು ಸಮರ್ಥವಾಗಿ ಹೋರಾಡಿ ರಕ್ಷಣೆ ಒದಗಿಸಲಿದೆ ಎಂದು ವರದಿಯಾಗಿದೆ.
Advertisement
Advertisement
ʻಇಂದ್ರಜಾಲ್ʼ ವಿಶೇಷತೆ ಏನು?
ಸಾಧಾರಣವಾಗಿ ಡ್ರೋನ್ ಎರಡು ರೀತಿಯಲ್ಲಿ ಶತ್ರು ಡ್ರೋನ್ ವಿರುದ್ಧ ಕಾರ್ಯಾಚರಣೆ ನಡೆಸುತ್ತದೆ. ಒಂದು ಡ್ರೋನ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದು ಇನ್ನೊಂದು ಡ್ರೋನ್ ಅನ್ನೇ ಹೊಡೆದುರುಳಿಸುವುದು. ಈ ಇಂದ್ರಜಾಲ್ ಡ್ರೋನ್ ಎರಡು ರೀತಿಯನ್ನು ಕಾರ್ಯಾಚರಣೆ ಮಾಡುವ ಸಾಮರ್ಥ್ಯ ಹೊಂದಿರುವುದು ವಿಶೇಷ. ಇದನ್ನೂ ಓದಿ: ಸಿಂಗಾಪುರ ಅಧ್ಯಕ್ಷರಾಗಿ ಆಯ್ಕೆಯಾದ ಭಾರತೀಯ ಮೂಲದ ಷಣ್ಮುಗರತ್ನಂಗೆ ಮೋದಿ ಅಭಿನಂದನೆ – ಯಾರಿವರು?
Advertisement
ಹೈದರಾಬಾದ್ ಮೂಲದ ಗ್ರೀನ್ ರೊಬೊಟಿಕ್ಸ್ ಸಂಸ್ಥೆಯು ವಿನ್ಯಾಸಗೊಳಿಸಿರುವ ಈ ಡ್ರೋನ್ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಚಾಲಿತ ವ್ಯವಸ್ಥೆಯನ್ನ ಒಳಗೊಂಡಿದೆ. 360 ಡಿಗ್ರಿ ರಕ್ಷಣೆ ಒದಗಿಸುತ್ತದೆ. ಕಾರ್ಯಾಚರಣೆ ಸಂದರ್ಭದಲ್ಲಿ ಶತ್ರುಗಳ ಬೆದರಿಕೆಗಳನ್ನ ಪತ್ತೆಹಚ್ಚುವ, ವರ್ಗೀಕರಿಸುವ, ಟ್ರ್ಯಾಕ್ ಮಾಡುವ ಮತ್ತು ತಟಸ್ಥಗೊಳಿಸುವ ಸಾಮರ್ಥ್ಯ ಹೊಂದಿರುವುದು ವಿಶೇಷ. 4,000 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಡ್ರೋನ್‌ಗಳನ್ನು ಇದು ಹೊಡೆದುರಳಿಸುವ ಸಾಮರ್ಥ್ಯ ಹೊಂದಿದೆ.
2020ರಲ್ಲಿ ಭಾರತದಲ್ಲಿ 76 ಡ್ರೋನ್ ದಾಳಿ ಪ್ರಕರಣಗಳು ವರದಿಯಾಗಿವೆ. 2021ರಲ್ಲಿ 109, 2022ರಲ್ಲಿ 266 ಪ್ರಕರಣಗಳು ವರದಿಯಾಗಿವೆ. ಇನ್ನೂ 2023ರ ಮೊದಲ ತಿಂಗಳು 8 ಪ್ರಕರಣಗಳು ವರದಿಯಾಗಿದ್ದು, ಈಗಾಗಲೇ ಪ್ರಕರಣಗಳ ಸಂಖ್ಯೆ 200ಕ್ಕೆ ಏರಿಕೆಯಾಗಿದೆ. ಹಾಗಾಗಿ ದೇಶದ ಭದ್ರತೆಗಾಗಿ ಪ್ರತಿಕೂಲ ಕ್ರಮಗಳನ್ನ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಚಂದ್ರನ ಮೇಲೆ ಹೊಸ ಕುಳಿ ಮೂಡಿಸಿದ ರಷ್ಯಾದ ಲೂನಾ-25 ಬಾಹ್ಯಾಕಾಶ ನೌಕೆ
ಇಂದ್ರಜಾಲ್ ವಿಶಾಲ ಪ್ರದೇಶವನ್ನ ಕವರ್ ಮಾಡುವುದರಿಂದ ದೆಹಲಿ ಎನ್‌ಸಿಆರ್ ಪ್ರದೇಶ, ಅಂತಾರಾಷ್ಟ್ರೀಯ ಗಡಿಗಳು, ವಿಐಪಿ ಜಾಥಾ ಅಥವಾ ಬೃಹತ್ ಜನಮೂಹ ಹೊಂದಿರುವ ಪ್ರದೇಶಳು ಹಾಗೂ ತೈಲ ಸಂಸ್ಕರಣಾ ಘಟಕಗಳ ಮೇಲೆ ಇದನ್ನು ಭದ್ರತೆಗೆ ನಿಯೋಜನೆ ಮಾಡಬಹುದು ಎಂದು ವಿಂಗ್ ಕಮಾಂಡರ್ ಸಾಯಿ ಮಲ್ಲೇಲ ತಿಳಿಸಿದ್ದಾರೆ.
2014 ರಿಂದ 2016ರ ವರೆಗೆ ಸೇನಾ ಸಿಬ್ಬಂದಿ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಉತ್ತರಾಖಂಡದ ಗರ್ವನರ್ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್, ಇಂದ್ರಜಾಲ್ ಅನ್ನು ಸಾರ್ವಜನಿಕರ ರಕ್ಷಣೆ, ಸಾರ್ವಜನಿಕರ ಮೂಲ ಸೌಕರ್ಯಗಳು ಹಾಗೂ ದೇಶದ ಭದ್ರತಾ ಸವಾಲುಗಳಿಗೆ ಪರಿಹಾರ ಕ್ರಮವಾಗಿ ಬಳಸಬಹುದು ಎಂದು ಸಲಹೆ ನೀಡಿದ್ದಾರೆ.
2021ರ ಜೂನ್ 27ರಂದು ಜಮ್ಮುವಿನ ವಿಮಾನ ನಿಲ್ದಾಣದ ಮೇಲೆ ಭೀಕರ ಡ್ರೋನ್ ದಾಳಿ ನಡೆದಿತ್ತು. ಅಲ್ಲದೇ ಕಳೆದ ಜೂನ್ 15 ರಂದು ಗಾಲ್ವಾನ್ ದಾಳಿಯನ್ನೂ ಎದುರಿಸಬೇಕಾಯಿತು. ಆ ಸಂದರ್ಭದಲ್ಲಿ ನಮ್ಮ ಬಳಿಕ ಏನು ಪರಿಹಾರವಿದೆ ಎಂದು ನಾವೇ ನೋಡಿಕೊಂಡಾಗ ಆಶ್ಚರ್ಯ ಪಡುವಂತಾಗಿತ್ತು. ಆದ್ರೆ ಇದೀಗ ಎಲ್ಲ ಸಮಸ್ಯೆಗಳಿಗೆ ಉತ್ತರವಾಗಿ ʻಇಂದ್ರಜಾಲ್ʼ ನಮ್ಮ ಮುಂದೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕೆಲ ದಿನಗಳ ಹಿಂದೆ ರಷ್ಯಾ ಉಕ್ರೇನ್ ಯುದ್ಧದಲ್ಲೂ ಇದೇ ಮಾದರಿಯ ಡ್ರೋನ್ ಅನ್ನು ಬಳಕೆ ಮಾಡಲಾಗಿತ್ತು.
Web Stories