ಹೈದರಾಬಾದ್: ಕಾಮುಕರು ಇನ್ಮುಂದೆ ಕನಸಲ್ಲೂ ರೇಪ್ ಅನ್ನೋ ಪದದ ಬಗ್ಗೆ ಯೋಚಿಸಬಾರದು. ಭಾರತದ ಕಾನೂನು, ಪೊಲೀಸ್ ಪವರ್ ಅಂದರೆ ಟೇಕನ್ ಫಾರ್ ಗ್ರಾಂಟೆಡ್ ಅಲ್ಲ. ಇಲ್ಲೂ ಸಹ ಕಠಿಣಾತಿಕಠಿಣ, ಅಷ್ಟೇ ಸೂಪರ್ ಫಾಸ್ಟ್ ಆಗಿ ಶಿಕ್ಷೆಗಳಿವೆ ಅಂತ ಬೆಚ್ಚಿಬೀಳುವಂತೆ ಅತ್ಯಾಚಾರಿಗಳ ವಿರುದ್ಧ ಇಡೀ ದೇಶವೇ ಬಯಸ್ತಿದ್ದಂತ ಕ್ರಮವನ್ನು ಇವತ್ತು ಹೈದರಾಬಾದ್ ಪೊಲೀಸರು ಮಾಡಿ ತೋರಿಸಿದ್ದಾರೆ.
ಹೈದರಾಬಾದ್‍ನ ಶಂಶಾಬಾದ್ ಔಟರ್ ರಿಂಗ್‍ರೋಡ್‍ನಲ್ಲಿ ನವೆಂಬರ್ 27ರಂದು 26 ವರ್ಷದ ಪಶುವೈದ್ಯೆಯ ಸ್ಕೂಟಿ ಪಂಕ್ಚರ್ ಮಾಡಿ, ಸಹಾಯದ ನೆಪದಲ್ಲಿ ಬಂದು, ಕಿಡ್ನಾಪ್ ಮಾಡಿ, ವಿಸ್ಕಿ ಕುಡಿಸಿ, ಮೃಗೀಯವಾಗಿ ಅತ್ಯಾಚಾರಗೈದು, ಸಜೀವ ದಹನ ಮಾಡಿದ್ದ ನಾಲ್ವರು ರೇಪಿಸ್ಟ್ ಗಳಾದ ಮೊಹಮದ್ ಆರಿಫ್(26), ಜೊಲ್ಲು ಶಿವ(20), ಜೊಲ್ಲು ನವೀನ್(20) ಮತ್ತು ಚನ್ನಕೇಶವುಲು(20)ನನ್ನು ಇವತ್ತು ಬೆಳಗ್ಗೆ 5.45ರಿಂದ 6.15ರ ಅವಧಿಯಲ್ಲಿ ಎನ್‍ಕೌಂಟರ್ ಮಾಡಿ ಹತ್ಯೆ ಮಾಡಲಾಗಿದೆ.
Advertisement
Advertisement
26 ವರ್ಷದ ಆ ಯುವತಿ ಎದೆಷ್ಟು ಯಾತನೆ ಅನುಭವಿಸಿ ಮಣ್ಣಾದಳೋ ಅದೇ ಸ್ಥಳದಲ್ಲಿ ನಾಲ್ವರು ಕೀಚಕರ ಸಂಹಾರವಾಗಿದೆ. ರೇಪಿಸ್ಟ್ ಗಳ ಎನ್‍ಕೌಂಟರ್ ಗೆ ಸ್ತ್ರೀಕುಲ ಮಾತ್ರ ಅಲ್ಲ, ಇಡೀ ದೇಶದ ಜನವೇ ಸಂಭ್ರಮಿಸಿದೆ. ಆದರೆ ಈ `ಎನ್‍ಕೌಂಟರ್’ ಪದ ಮಾತ್ರ ಪಾರ್ಲಿಮೆಂಟ್, ಮಾನವ ಹಕ್ಕು ಆಯೋಗದಲ್ಲಿ ವ್ಯಾಪಕ ಚರ್ಚೆಗೀಡಾಗಿದೆ. ಇದನ್ನು ಓದಿ: ಎನ್‍ಕೌಂಟರ್ ‘ಯೋಜಿತ ಕೊಲೆ’, ಅಂಗಾಂಗಳ ಮೇಲೆ ಶೂಟ್ ಮಾಡಿದ್ದು ಯಾಕೆ – 4 ಪ್ರಶ್ನೆ ಮುಂದಿಟ್ಟ ಮಾನವಹಕ್ಕುಗಳ ಸಂಸ್ಥೆ
Advertisement
ಎನ್‍ಕೌಂಟರ್ ನಡೆದಿದ್ದು ಹೇಗೆ?
ಡಿಸೆಂಬರ್ 4 ರಂದು ಕೋರ್ಟ್ ಆರೋಪಿಗಳನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತ್ತು. ಗುರುವಾರ ಠಾಣೆಯಲ್ಲಿ ಆರೋಪಿಗಳನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ಯುವತಿಯ ಮೊಬೈಲ್, ವಾಚ್, ಪವರ್ ಬ್ಯಾಂಕ್ ಹೂತಿಟ್ಟ ಬಗ್ಗೆ ಆರೋಪಿಗಳು ಬಾಯಿಬಿಟ್ಟಿದ್ದರು. ಈ ವಸ್ತುಗಳನ್ನು ಪಡೆಯಲು ಪೊಲೀಸರು ಆರೋಪಿಗಳನ್ನು ಕೃತ್ಯ ಎಸಗಿದ ಸ್ಥಳಕ್ಕೆ ಕರೆದುಕೊಂಡು ಬಂದಿದ್ದರು.
Advertisement
ಮೊದಲಿಗೆ ಯುವತಿಯ ದಹನಕ್ಕೆ ಪೆಟ್ರೋಲ್ ಖರೀದಿಸಿದ್ದ ಸ್ಥಳಕ್ಕೂ ಕರೆದೊಯ್ಯಲಾಗಿತ್ತು. ನಂತರ ಯುವತಿ ವಸ್ತುಗಳ ಪತ್ತೆಗಾಗಿ ಚಟ್ಟಪಲ್ಲಿಯ ಘಟನಾ ಸ್ಥಳಕ್ಕೆ ಆರೋಪಿಗಳನ್ನು ಕರೆತಂದಿದ್ದರು. ಎ-1(ಆರೋಪಿ 1) ಆರಿಫ್, ಎ-2 ಜೊಲ್ಲು ಶಿವ, ಎ-3 ಜೊಲ್ಲು ನವೀನ್, ಎ-4 ಚನ್ನಕೇಶವುಲು ಕೈಗೆ ಕೋಳ ತೊಡಿಸಿರಲಿಲ್ಲ. ನಾಲ್ವರು ಆರೋಪಿಗಳನ್ನು 10 ಮಂದಿ ಶಸ್ತ್ರಸಜ್ಜಿತ ಪೊಲೀಸರ ತಂಡ ಸುತ್ತುವರಿದಿತ್ತು. ಹೂತಿಟ್ಟ ವಸ್ತುಗಳಿದ್ದ ಜಾಗ ತೋರಿಸಿ ಎಂದಾಗ ಆರೋಪಿಗಳು ಪೊಲೀಸರನ್ನು ಅಡ್ಡಾಡಿಸಿ “ಅಲ್ಲಿದೆ, ಇಲ್ಲಿದೆ” ಎಂದು ಹೇಳಿ ತನಿಖೆಯ ದಾರಿ ತಪ್ಪಿಸುವ ಯತ್ನ ನಡೆಸಿದರು. ಇದನ್ನು ಓದಿ: ಪಿಸ್ತೂಲ್ ಕಸಿದುಕೊಂಡು ಪೊಲೀಸರ ಮೇಲೆ ಹಲ್ಲೆ ಎಸಗಿದ್ದಕ್ಕೆ ಗುಂಡೇಟು – ಕನ್ನಡದಲ್ಲಿ ವಿವರಿಸಿದ ಸಜ್ಜನರ್
ಈ ಸಂದರ್ಭದಲ್ಲಿ ಕೈಗೆ ಸಿಕ್ಕ ಹರಿತವಾದ ವಸ್ತುಗಳು, ಕಲ್ಲುಗಳಿಂದ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ದಿಢೀರ್ ದಾಳಿಯಿಂದ ವಿಚಲಿತಗೊಂಡ ಪೊಲೀಸರಿಂದ ಎ1 ಆರೀಫ್, ಎ4 ಚನ್ನಕೇಶವುಲು ಪಿಸ್ತೂಲ್ ಕಸಿದುಕೊಳ್ಳುತ್ತಾರೆ. ಕೂಡಲೇ ಪೊಲೀಸರು ಶರಣಾಗುವಂತೆ ಎಚ್ಚರಿಕೆ ನೀಡುತ್ತಾರೆ. ಎಚ್ಚರಿಕೆ ನೀಡಿದರೂ ಪೊಲೀಸರ ಮೇಲೆ ಆರೀಫ್, ಚನ್ನಕೇಶವುಲು ಗುಂಡಿನ ದಾಳಿ ನಡೆಸುತ್ತಾರೆ. ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಲು ಆರೋಪಿಗಳು ಮುಂದಾಗುತ್ತಿದ್ದಂತೆ ಆತ್ಮರಕ್ಷಣೆಗಾಗಿ ಗುಂಡು ಹಾರಿಸುವಂತೆ ಸಿಬ್ಬಂದಿಗೆ ಎಸ್‍ಐ ವೆಂಕಟೇಶ್ವರಲು ಸೂಚನೆ ನೀಡುತ್ತಾರೆ.
ಕೂಡಲೇ ನಾಲ್ವರು ಆರೋಪಿಗಳಿಗೆ ಪೊಲೀಸ್ ಟೀಂ ಗುಂಡು ಹಾರಿಸಿಸುತ್ತದೆ. ಬೆಳಗ್ಗೆ 5.45ರಿಂದ 6.15ರ ಅವಧಿಯಲ್ಲಿ ಗುಂಡಿನ ದಾಳಿ ನಡೆದಿದ್ದು ಎಸ್‍ಐ ವೆಂಕಟೇಶ್ವರಲು, ಪಿಸಿ ಅರವಿಂದ್ ತಲೆಗೆ ಗಂಭೀರ ಗಾಯವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.