ಹೈದರಾಬಾದ್: ಕಳೆದೆರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ವೈದ್ಯ ದಂಪತಿ ಗುರುವಾರ ಹೈದರಾಬಾದ್‍ನಲ್ಲಿರುವ (Hyderabad) ತಮ್ಮ ನಿವಾಸದ ಸ್ನಾನಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಸ್ನಾನಗೃಹದ ಗೀಸರ್ ವೈಯರ್‌ನ ಕರೆಂಟ್ ಶಾಕ್‍ನಿಂದ ದಂಪತಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮೃತರನ್ನು ಡಾ. ಸೈಯದ್ ನಿಸಾರುದ್ದೀನ್(26) ಮತ್ತು ಅವರ ಪತ್ನಿ ಉಮ್ಮೆ ಮೊಹಿಮೀನ್ ಸೈಮಾ (22) ಎಂದು ಗುರುತಿಸಲಾಗಿದ್ದು, ಈ ದಂಪತಿ ಖಾದರ್‍ಬಾಗ್ ಪ್ರದೇಶದ (Khaderbagh locality) ನಿವಾಸಿಯಾಗಿದ್ದಾರೆ. ಇದನ್ನೂ ಓದಿ: ನಿಮ್ಮ ಬಳಿ ಬಟ್ಟೆ ಹಾವಿದ್ರೆ, ನನ್ನ ಬಳಿ ನಿಜವಾದ ಹಾವಿದೆ: ಬಿಜೆಪಿ ನಾಯಕರಿಗೇ ಯತ್ನಾಳ್ ಟಾಂಗ್
Advertisement
Advertisement
ಮನೆಯೊಳಗೆ ಪ್ರವೇಶಿಸಿದ ನಮಗೆ ಏನೋ ಅನಾಹುತ ಸಂಭವಿಸಿರಬಹುದು ಎಂದು ಶಂಕಿಸಿ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿದೆವು. ನಂತರ ಕಿಟಕಿಯ ಮೂಲಕ ನೋಡಿದಾಗ ದಂಪತಿ ಸಾವನ್ನಪ್ಪಿರುವುದು ಕಂಡುಬಂದಿದೆ ಎಂದು ಉಮ್ಮೆ ಮೊಹಿಮೀನ್ ಸೈಮಾ ಅವರ ತಂದೆ ಹೇಳಿದ್ದಾರೆ.
Advertisement
Advertisement
ಬುಧವಾರ ರಾತ್ರಿ ಸೂರ್ಯಪೇಟೆಯಿಂದ ದಂಪತಿ ಮರಳಿದ್ದರು. ಗುರುವಾರ ಬೆಳಗ್ಗೆ ಈ ಘಟನೆ ನಡೆದಿರಬಹುದು. ಆದರೆ ಸಂಜೆವರೆಗೂ ಈ ಬಗ್ಗೆ ಯಾರಿಗೂ ತಿಳಿದುಬಂದಿಲ್ಲ. ಆದರೆ ರಾತ್ರಿ 11:30ಕ್ಕೆ ನಮಗೆ ಈ ಬಗ್ಗೆ ಮಾಹಿತಿ ದೊರೆಯಿತು. ನಂತರ ಘಟನಾ ಸ್ಥಳಕ್ಕೆ ಹೋದಾಗ ದಂಪತಿ ಶವವಾಗಿ ಪತ್ತೆಯಾಗಿದ್ದಾರೆ. ಪತಿ ಪತ್ನಿಯನ್ನು ಉಳಿಸಲು ಹೋದಾಗ ಪತಿ ಕೂಡ ಸಾವನ್ನಪ್ಪಿದ್ದಾರೆ ಎಂದು ತನಿಖಾಧಿಕಾರಿ ಸಬ್ ಇನ್ಸ್‌ಪೆಕ್ಟರ್ ಎಸ್ ಶೃತಿ ತಿಳಿಸಿದ್ದಾರೆ. ಇದನ್ನೂ ಓದಿ: ದಲಿತ ಯುವಕನ ಮುಖಕ್ಕೆ ಮಸಿ ಬಳಿದು, ಕಂಬಕ್ಕೆ ಕಟ್ಟಿ ಥಳಿತ – ಇಬ್ಬರು ಅರೆಸ್ಟ್
ಸೈಮಾ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದರೆ, ಆಕೆಯ ಪತಿ ಸೈಯದ್ ನಿಸಾರುದ್ದೀನ್ ಸೂರ್ಯಪೇಟೆಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರು. ಗುರುವಾರ ಬೆಳಗ್ಗೆ ತಂದೆ ಜೊತೆಗೆ ಮಾತನಾಡಿದ್ದ ಸೈಮಾ, ಮತ್ತೆ ಕರೆ ಮಾಡುವುದಾಗಿ ಹೇಳಿದ್ದರು. ಆದರೆ ಪುನಃ ಯಾವುದೇ ಕರೆ ಮಾಡಲಿಲ್ಲ. ಇಬ್ಬರೂ ಕೆಲಸಕ್ಕೆ ಹೋಗಿರಬೇಕು ಎಂದು ಅವರ ತಂದೆ ಅಂದುಕೊಂಡಿದ್ದರು. ಆದರೆ ಸಂಜೆ ಕರೆ ಮಾಡಿದಾಗ ಕರೆ ಸ್ವೀಕರಿಸದೇ ಇದ್ದಿದ್ದರಿಂದ ಅನುಮಾನಗೊಂಡ ಕುಟುಂಬಸ್ಥರು ಅಪಾರ್ಟ್‍ಮೆಂಟ್‍ಗೆ ಬಂದು ನೋಡಿದ್ದಾರೆ. ಈ ವೇಳೆ ಘಟನೆ ಬಗ್ಗೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.