ಶಿಮ್ಲಾ: ಹೈದರಾಬಾದ್ ಮೂಲದ ವೈದ್ಯರೊಬ್ಬರು ಪ್ಯಾರಗ್ಲೈಡಿಂಗ್ ಅಪಘಾತದಲ್ಲಿ ಮೃತಪಟ್ಟ ಘಟನೆ ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ನಡೆದಿದೆ.
ಚಂದ್ರಶೇಖರ್ ಮೃತಪಟ್ಟ ವೈದ್ಯ. ಚಂದ್ರಶೇಖರ್ ಹೈದರಾಬಾದ್‍ನ ಇಸಿಐಎಲ್ ಏರಿಯಾದ ಆಸ್ಪತ್ರೆವೊಂದರಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಶನಿವಾರ ಚಂದ್ರಶೇಖರ್ ಅವರು ಪ್ಯಾರಗ್ಲೈಡಿಂಗ್‍ಗೆ ಹೋಗಿದ್ದರು. ಈ ವೇಳೆ ಪ್ಯಾರಗ್ಲೈಡಿಂಗ್ ಅವಘಡದಿಂದ ಮೃತಪಟ್ಟಿದ್ದಾರೆ.
Advertisement
ಗುರುವಾರದಿಂದ ನನ್ನ ಸಹೋದರ ಚಂದ್ರಶೇಖರ್ ಕುಲ್ಲು ಮನಾಲಿಯಲ್ಲಿ ರಜೆ ದಿನಗಳನ್ನು ಕಳೆಯಲು ಹೋಗಿದ್ದನು. ಶನಿವಾರ ಪ್ಯಾರಗ್ಲೈಡಿಂಗ್ ಅಪಘಾತದಲ್ಲಿ ನನ್ನ ಸಹೋದರ ಮೃತಪಟ್ಟಿದ್ದಾನೆ ಎಂಬ ಮಾಹಿತಿ ನಮಗೆ ದೊರೆಯಿತು ಎಂದು ಚಂದ್ರಶೇಖರ್ ಸಹೋದರಿ ಉಮಾ ಮಹೇಶ್ವರಿ ಪ್ರತಿಕ್ರಿಯಿಸಿದ್ದಾರೆ.
Advertisement
Advertisement
ಈ ಅಪಘಾತದಿಂದ ಕೆಳಗೆ ಬಿದ್ದಾಗ ಚಂದ್ರಶೇಖರ್ ಗೆ ಗಂಭೀರ ಗಾಯಗಾಳಾಗಿದೆ. ಅಲ್ಲದೆ ಚಂದ್ರಶೇಖರ್ ಜೊತೆಯಲ್ಲಿದ್ದ ಪ್ಯಾರಚ್ಯೂಟ್ ಅಪರೇಟರ್ ಗೆ ಫ್ರ್ಯಾಕ್ಚರ್ ಆಗಿದೆ. ಕುಲ್ಲು ಮನಾಲಿಯಲ್ಲಿ ಚಂದ್ರಶೇಖರ್ ಮತ್ತು ಪ್ಯಾರಚ್ಯೂಟ್ ಅಪರೇಟರ್ ಫ್ಲೈಟ್ ಹತ್ತಿದ್ದರು.
Advertisement
ನನ್ನ ಸಹೋದರ ಚಂದ್ರಶೇಖರ್ ಕೆಳಗೆ ಬಿದ್ದ ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದೇವು. ಆದರೆ ಅಷ್ಟರಲ್ಲಿ ವೈದ್ಯರು ಆತನು ಮೃತಪಟ್ಟಿದ್ದಾರೆ ಎಂದು ಹೇಳಿದರು ಎಂದು ಉಮಾ ಮಹೇಶ್ವರಿ ತಿಳಿಸಿದ್ದಾರೆ.
ಚಂದ್ರಶೇಖರ್ ಮೃತದೇಹವನ್ನು ಹೈದರಾಬಾದ್‍ಗೆ ತರಲು ಸರ್ಕಾರದ ಸಹಾಯ ಕೇಳಿದ್ದೇವೆ. ಅಲ್ಲದೆ ನಮ್ಮ ಇಡೀ ಕುಟುಂಬ ಅವನನ್ನು ಅವಲಂಬಿತವಾಗಿತ್ತು ಎಂದು ಉಮಾ ಮಹೇಶ್ವರಿ ಹೇಳಿದ್ದಾರೆ.