– ಬೀಗ ಒಡೆದು ನೋಡಿದ ಸಿಬ್ಬಂದಿಗೆ ಶಾಕ್
– ಹೊರಗೆ ಬೀಗ, ಒಳಗಿಬ್ಬರು ಲಾಕ್
ಹೈದರಾಬಾದ್: ವಿದ್ಯಾರ್ಥಿನಿಯರ ಹಾಸ್ಟೆಲ್‍ನಲ್ಲಿ 16ರ ವಿದ್ಯಾರ್ಥಿ ಇಡೀ ರಾತ್ರಿ ಕಳೆದು, ಕೊನೆಗೆ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದ ಘಟನೆ ಆಂಧ್ರಪ್ರದೇಶದ ನುಜ್ವಿಡ್‍ನಲ್ಲಿ ಬೆಳಕಿಗೆ ಬಂದಿದೆ.
Advertisement
ನುಜ್ವಿಡ್‍ನ ಐಐಐಟಿ ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟೆಲ್‍ನಲ್ಲಿ ಈ ಘಟನೆ ನಡೆದಿದೆ. ಫೆ. 16ರಂದು ಈ ಘಟನೆ ನಡೆದಿದ್ದು, ಹಾಸ್ಟೆಲ್‍ನಲ್ಲಿ ಇದ್ದ ಇತರೆ ವಿದ್ಯಾರ್ಥಿನಿಯರು ವಿಡಿಯೋವನ್ನು ಎಲ್ಲೆಡೆ ಹರಿಬಿಟ್ಟ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಹಾಸ್ಟೆಲ್ ಕೋಣೆಯ ಕಿಟಕಿ ಮೂಲಕ ಒಳಗೆ ನುಗ್ಗಿದ್ದ ವಿದ್ಯಾರ್ಥಿ ಇಡೀ ರಾತ್ರಿ ವಿದ್ಯಾರ್ಥಿಯೋರ್ವಳ ಜೊತೆ ಬೀಗ ಹಾಕಿದ್ದ ಕೋಣೆಯಲ್ಲಿ ಇದ್ದ. ಇದಕ್ಕೆ ವಿದ್ಯಾರ್ಥಿನಿಯ ಸಹಪಾಠಿಗಳು ಇಬ್ಬರು ಜೊತೆಗಿರಲು ಸಹಾಯ ಮಾಡಿದ್ದರು ಎಂಬುದು ಕೂಡ ತಿಳಿದು ಬಂದಿದೆ.
Advertisement
Advertisement
ಬೀಗ ಹಾಕಿದ್ದ ಕೋಣೆಯಲ್ಲಿ ಯಾರೋ ಇದ್ದಾರೆ ಎಂದು ಅನುಮಾನ ಬಂದು ಭದ್ರತಾ ಸಿಬ್ಬಂದಿ ಬೀಗ ಮುರಿದು ನೋಡಿದಾಗ ಸತ್ಯಾಂಶ ಹೊರಬಿದ್ದಿದೆ. ಬೀಗ ಮುರಿದಾಗ ಕೊಣೆಯಲ್ಲಿ ವಿದ್ಯಾರ್ಥಿನಿ ಇದ್ದಿದ್ದನ್ನು ನೋಡಿ ಸಿಬ್ಬಂದಿ ಶಾಕ್ ಆಗಿದ್ದರು. ಬಳಿಕ ಕೋಣೆಯನ್ನು ಪರಿಶೀಲನೆ ನಡೆಸಿದಾಗ ಮಂಚದ ಕೆಳಗೆ ಅವಿತು ಕುಳಿತ್ತಿದ್ದ ವಿದ್ಯಾರ್ಥಿ ಪತ್ತೆಯಾಗಿದ್ದನು. ತಕ್ಷಣ ಈ ಬಗ್ಗೆ ಸಿಬ್ಬಂದಿ ಕಾಲೇಜು ಮಂಡಳಿಗೆ ಮಾಹಿತಿ ನೀಡಿದರು. ಆ ಬಳಿಕ ವಿದ್ಯಾರ್ಥಿ ಹಾಸ್ಟೆಲ್ ಕೋಣೆಗೆ ಬರಲು ಸಹಾಯ ಮಾಡಿದ ಎಲ್ಲಾ ವಿದ್ಯಾರ್ಥಿನಿಯರ ಪೋಷಕರನ್ನು ಕರೆಸಿ, ಈ ಬಗ್ಗೆ ವಿಷಯ ಮುಟ್ಟಿಸಲಾಯ್ತು.
Advertisement
ವಿದ್ಯಾರ್ಥಿ ಹಾಸ್ಟೆಲ್ ಒಳಗೆ ಬರಲು ಸಹಾಯ ಮಾಡಿದ್ದ ಸಹಪಾಠಿಗಳು ಹಾಗೂ ವಿದ್ಯಾರ್ಥಿನಿ ಸೇರಿ 6 ಮಂದಿಯನ್ನು ಕಾಲೇಜಿನಿಂದ ಅಮಾನತು ಗೊಳಿಸಿದ್ದು, ವಿದ್ಯಾರ್ಥಿನಿಯರಿಗೆ ಕೌನ್ಸಿಲಿಂಗ್ ನೀಡಿಸಿದ್ದಾರೆ. ಅಲ್ಲದೆ ಈ ಬಗ್ಗೆ ತನಿಖೆ ನಡೆಸಲು ಕಾಲೇಜು ಆಡಳಿತ ಮಂಡಳಿ ಶಿಸ್ತಿನ ಸಮಿತಿ ರಚಿಸಿದೆ.