ಹೈದರಾಬಾದ್: ಸಾಧನೆಗೆ ವಯಸ್ಸಿನ ಮಿತಿ ಇಲ್ಲ ಅನ್ನೊದನ್ನು ಪ್ರೂವ್ ಮಾಡಿದ್ದಾನೆ ಹೈದರಾಬಾದಿನ ಈ ಪೋರ. 11 ವರ್ಷದ ಅಗಸ್ತ್ಯ ಜಸ್ವಾಲ್ 12ನೇ ತರಗತಿಯ ಪರೀಕ್ಷೆ ಬರೆಯುವ ಮೂಲಕ ಅಚ್ಚರಿಗೆ ಕಾರಣನಾಗಿದ್ದಾನೆ. ಆದ್ರೆ ಈತನ ಕುಟುಂಬದಲ್ಲಿ ಇಂತಹ ಅಚ್ಚರಿ ಘಟನೆಗಳು ಇದು ಮೊದಲೇನಲ್ಲ.
Advertisement
ಸಾಧಕ ಸಾಹಸಿ ಈ ಅಗಸ್ತ್ಯ ಸೆಂಟ್ ಮೇರಿಸ್ ಜೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಪೌರನೀತಿ, ಅರ್ಥಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರ ವಿಷಯಗಳನ್ನು ಪರೀಕ್ಷೆಗಾಗಿ ಆಯ್ಕೆ ಮಾಡಿಕೊಂಡಿದ್ದ ಅವನ ಪೋಷಕರು ಹೇಳಿದ್ದಾರೆ.
Advertisement
Advertisement
ಅಗಸ್ತ್ಯ ಇವತ್ತು ಹೈದರಾಬಾದಿನ ಚೈತನ್ಯ ಜುನಿಯರ್ ಕಲಾಶಾಲಾ ಜಿಬ್ಲಿ ಹಿಲರ್ ಎನ್ನುವ ಕಾಲೇಜಿನಲ್ಲಿ 12ನೇ ತರಗತಿ ಪರಿಕ್ಷೆಯನ್ನು ಬರೆದಿದ್ದಾನೆ.
Advertisement
ಅಗಸ್ತ್ಯನ ಹಿರಿಯ ಅಣ್ಣ ನೈನಾ ಜೈಸ್ವಾಲ್ ಅಂತಾರಾಷ್ಟ್ರೀಯ ಟೇಬಲ್ ಟೆನ್ನಿಸ್ ಆಟಗಾರನಾಗಿದ್ದು, ಅತ್ಯಂತ ಕಿರಿಯ ವಯಸ್ಸಿನಲ್ಲೇ ಪಿಹೆಚ್‍ಡಿ ಪದವಿಯನ್ನು ಪಡೆದಿದ್ದ. ತಂದೆ ಜಸ್ವಾಲ್ ಕೂಡಾ 15 ವರ್ಷ ವಯಸ್ಸಿನಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಎಂಬುವುದಾಗಿ ವರದಿಯಾಗಿದೆ.