ಹೈದರಾಬಾದ್: ಇಲ್ಲಿನ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ (Madhavi Latha) ಅವರಿಗೆ ವೈ+ ಭದ್ರತೆ ಒದಗಿಸಲಾಗಿದೆ. ಅವರು ಅಸಾದುದ್ದೀನ್ ಓವೈಸಿ (Asaduddin Owaisi) ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಬೆದರಿಕೆ ವರದಿಯ ಆಧಾರದ ಮೇಲೆ ಗೃಹ ಸಚಿವಾಲಯವು ಮಾಧವಿ ಲತಾ ಅವರಿಗೆ ಈ ಭದ್ರತೆಯನ್ನು ನೀಡುತ್ತಿದೆ. ಮಾಹಿತಿ ಪ್ರಕಾರ, Y+ ಕೆಟಗರಿಯ ಭದ್ರತೆಗಾಗಿ 11 ಕಮಾಂಡೋಗಳನ್ನು ನಿಯೋಜಿಸಲಾಗಿದೆ. ಇನ್ನು ವಿಐಪಿಯ ಮನೆಯ ಸುತ್ತಲೂ ಐದು ಸ್ಟಾಟಿಕ್ ಪೊಲೀಸ್ ಸಿಬ್ಬಂದಿ ಅವರ ಭದ್ರತೆಗಾಗಿ ಹಾಜರಿರುತ್ತಾರೆ. ಜೊತೆಗೆ 6 ಮಂದಿ ಪಿಎಸ್‌ಒಗಳು ಆಯಾ ವಿಐಪಿಗಳಿಗೆ ಮೂರು ಪಾಳಿಯಲ್ಲಿ ಭದ್ರತೆಯನ್ನು ಒದಗಿಸುತ್ತಾರೆ.
Advertisement
Advertisement
ಮಾಧವಿ ಲತಾ ಯಾರು?: ಕೋಟಿ ಮಹಿಳಾ ಕಾಲೇಜಿನಲ್ಲಿ ರಾಜ್ಯಶಾಸ್ತ್ರದಲ್ಲಿ ಎಂಎ ಮಾಡಿದ್ದಾರೆ. ಮಾಧವಿಯವರು ಹಿಂದುತ್ವದ ಪರವಾಗಿ ಧ್ವನಿ ಎತ್ತುತ್ತಾರೆ. ವಿರಿಂಚಿ ಆಸ್ಪತ್ರೆಯ ಅಧ್ಯಕ್ಷೆಯಾಗಿರುವ ಮಾಧವಿ ಲತಾ, ಭರತನಾಟ್ಯ ನೃತ್ಯಗಾರ್ತಿಯೂ ಹೌದು. ಅವರು ಹೈದರಾಬಾದ್‌ನಲ್ಲಿ ಸಾಮಾಜಿಕ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಜೊತೆಗೆ ಲೋಪಾಮುದ್ರಾ ಚಾರಿಟೇಬಲ್ ಟ್ರಸ್ಟ್ ಮತ್ತು ಲತಾಮಾ ಫೌಂಡೇಶನ್ ಮುಖ್ಯಸ್ಥರಾಗಿದ್ದು, ಈ ಟ್ರಸ್ಟ್‌ಗಳು ಮತ್ತು ಸಂಸ್ಥೆಗಳು ಆರೋಗ್ಯ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿವೆ.
Advertisement
Advertisement
ಬಿಜೆಪಿಯಿಂದ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿ ಕಣಕ್ಕೆ: ಇದೇ ಮೊದಲ ಬಾರಿಗೆ ಹೈದರಾಬಾದ್‌ನ ಮಹಿಳಾ ಅಭ್ಯರ್ಥಿಯ ಮೇಲೆ ಬಿಜೆಪಿ ತನ್ನ ಪಣತೊಟ್ಟಿದೆ. ಈ ಹಿಂದೆ ಪಕ್ಷವು ಭಾಗವತ್ ರಾವ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಮಾಡಿತ್ತು. ಆದರೆ ಭಾಗವತ್ ಅವರು ಓವೈಸಿಯಿಂದ ಸುಮಾರು 3 ಲಕ್ಷ ಮತಗಳಿಂದ ಸೋಲನ್ನು ಎದುರಿಸಬೇಕಾಯಿತು. ಈ ಬಾರಿ ಬಿಜೆಪಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಸ್ಪರ್ಧೆಯನ್ನು ಕಠಿಣಗೊಳಿಸಲು ಪ್ರಯತ್ನಿಸಿದೆ.