Connect with us

Latest

ಮಹಿಳೆಯರ ಸುರಕ್ಷತೆಗೆ 18ರ ಯುವಕ ತಯಾರಿಸಿದ್ದಾನೆ `ಎಲೆಕ್ಟ್ರೋಶೂ’!

Published

on

ಹೈದರಾಬಾದ್: ದೆಹಲಿಯಲ್ಲಿ ನಿರ್ಭಯಾ ಮೇಲೆ ಗ್ಯಾಂಗ್ ರೇಪ್ ನಡೆದ ಬಳಿಕ ಇದೀಗ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇರುತ್ತವೆ. ಹೀಗಾಗಿ ಹೈದರಾಬಾದ್ ಮೂಲದ ಯುವಕನೊಬ್ಬ ಮಹಿಳೆಯರ ರಕ್ಷಣೆಗೆಂದು ವಿನೂತನವಾದ ಚಪ್ಪಲಿಯೊಂದನ್ನು ತಯಾರಿಸಿದ್ದಾನೆ.

ಹೈದರಾಬಾದ್ ನ ಸಿದ್ದಾರ್ಥ್ ಮಂಡಲ ಈ ವಿಶೇಷ ಚಪ್ಪಲಿಯನ್ನು ತಯಾರಿಸಿದ ವ್ಯಕ್ತಿ. ಹೈದರಾಬಾದ್‍ನ ಹಿಮಾಯತ್ ನಗರದ ನಿವಾಸಿಯೋಗಿರೋ ಸಿದ್ದಾರ್ಥ್, ಉದ್ಯಮಿ ಶ್ರೀರಾಮ್ ಮಂಡಲ ಹಾಗೂ ಶಶಿಕಲಾ ಮಂಡಲ ಅವರ ಪುತ್ರನಾಗಿದ್ದಾನೆ. ಸದ್ಯ ಈತನಿಗೆ 18 ವರ್ಷ ವಯಸ್ಸು.

ಏನಿದರ ವಿಶೇಷತೆ?: ಈ ಶೂ ಧರಿಸಿದ್ದ ವೇಳೆ ಯಾರಾದ್ರೂ ನಿಮ್ಮ ಮೇಲೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದರೆ ನೇರವಾಗಿ ಮಹಿಳೆಯ ಅಥವಾ ಯುವತಿಯ ಕುಟುಂಬರಿಗೆ ಹಾಗೂ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ರವಾನೆಯಾಗುತ್ತದೆ. ಅಲ್ಲದೇ ಅಸಭ್ಯವಾಗಿ ವರ್ತಿಸಿದ ವೇಳೆ ಅವರಿಗೆ ಒಂದು ಒದೆ ಕೊಟ್ಟಲ್ಲಿ ಅವರು ಶಾಕ್ ಗೆ ಒಳಗಾಗುತ್ತಾರೆ.

ಈ ಶೂ ತಯಾರಿಗೆ ಕಾರಣವೇನು?: 2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ವೇಳೆ ಸಿದ್ದಾರ್ಥ್ ಗೆ 12ರ ಹರೆಯ. ಘಟನೆಯಿಂದ ಚಿಂತೆಗೀಡಾದ ಬಾಲಕ ಸಿದ್ದಾರ್ಥ್ ಮಹಿಳೆಯರ ರಕ್ಷಣೆಗೆ ಕೊಡುಗೆ ನೀಡಬೇಕೆಂದು ಪಟ್ಟು ಹಿಡಿದಿದ್ದನು. ಅಂತೆಯೇ ಇಂದು ಆತ ಈ ಶೂ ತಯಾರು ಮಾಡುವಲ್ಲಿ ಯಶಸ್ವಿಯಾಗಿದ್ದು, ಇದರಿಂದ ಯುವತಿ ಅಥವಾ ಮಹಿಳೆಯರಿಗೆ ಯಾರಾದ್ರೂ ಕಿರುಕುಳ ನೀಡಿದ್ರೆ ಎಲೆಕ್ಟ್ರಿಕ್ ಶಾಕ್ ಹೊಡೆಯುತ್ತೆ ಅಂತ ಸಿದ್ದಾರ್ಥ್ ಹೇಳಿದ್ದಾನೆ.

ಶೂವನ್ನೇ ಯಾಕೆ ಆಯ್ಕೆ ಮಾಡಿಕೊಂಡ?: ಮೊದಲು ಮಹಿಳೆಯರು ಏನಾದ್ರೂ ಕೈಲಿ ಹಿಡಿದುಕೊಂಡು ಹೋಗುವಂತದ್ದನ್ನು ತಯಾರು ಮಾಡುವ ಪ್ಲಾನ್ ಹೊಳೆದಿತ್ತು. ಆದ್ರೆ ಎಲ್ಲಾ ಸಮಯದಲ್ಲೂ ಇದು ಕಷ್ಟ ಸಾಧ್ಯವೆಂದು ಅವನು ಅರಿತ. ಕೆಲವೊಂದು ಬಾರಿ ಕೆಲಸದ ಒತ್ತಡದ ವೇಳೆ ರಕ್ಷಣೆಯ ವಸ್ತುಗಳನ್ನು ಕೊಂಡೊಯ್ಯಲು ಮರೆಯಬಹುದು. ಹೀಗಾಗಿ ಬೇರೆ ಏನಾದ್ರೂ ಉಪಾಯ ಮಾಡೋಣ ಅಂತ ಯೋಚಿಸಿತೊಡಗಿದ್ದನು. ಈ ವೇಳೆ ಆತನ ತಲೆಯಲ್ಲಿ ಹೊಳೆದಿದ್ದು ಚಪ್ಪಲಿ ಅಥವಾ ಶೂ. ಹೀಗಾಗಿ ಆತ ಮಹಿಳೆಯರ ರಕ್ಷಣೆಗಾಗಿ ಯಾವ ರೀತಿ ಒಂದು ಶೂ ಅಥವಾ ಚಪ್ಪಲಿ ತಯಾರಿಸಬಹುದೆಂದು ಯೋಚಿಸಿ ಅದ್ರ ನಕಲಿಯನ್ನು ತಯಾರಿಸಿದ್ದಾನೆ.

ಈಗ ನಾನು ಸಾಧನದ ಮಾದರಿಯನ್ನು ತಯಾರಿಸಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಪಡಿಸುತ್ತೇನೆ. ಒಟ್ಟಿನ್ಲಲಿ ಮಹಿಳೆಯ ರಕ್ಷಣೆಗಾಗಿ ಒಂದು ಚಪ್ಪಲಿ ಅಥವಾ ಶೂ ತಯಾರಿಸಲು ಎರಡು ವರ್ಷ ಬೇಕಾಯಿತು. ಈ ಮಧ್ಯೆ ಓದಿನ ಕಡೆಗೂ ಸ್ವಲ್ಪ ಗಮನಹರಿಸಬೇಕಾಯಿತು ಅಂತ ಸಿದ್ದಾರ್ಥ್ ಹೇಳಿದ್ದಾನೆ.

Click to comment

Leave a Reply

Your email address will not be published. Required fields are marked *

www.publictv.in