ಹೈದರಾಬಾದ್: ಟ್ರಾಫಿಕ್ ಕ್ಲಿಯರ್ ಮಾಡಿಕೊಂಡು ರಸ್ತೆ ಬದಿಯಲ್ಲಿ ಸ್ನ್ಯಾಕ್ಸ್ ತೆಗೆದುಕೊಳ್ಳುವುದಕ್ಕೆ ಅಂಬುಲೆನ್ಸ್ ಚಾಲಕ ಸೈರನ್ ಅನ್ನು ದುರುಪಯೋಗಪಡಿಸಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ದೃಶ್ಯದ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.
ಖಾಸಗಿ ಆಸ್ಪತ್ರೆಯ ಅಂಬುಲೆನ್ಸ್ ಚಾಲಕನೊಬ್ಬ ಟ್ರಾಫಿಕ್ ಕ್ಲಿಯರೆನ್ಸ್ ಪಡೆಯಲು ಅಂಬುಲೆನ್ಸ್ ಸೈರನ್ ದುರುಪಯೋಗಪಡಿಸಿಕೊಂಡಿದ್ದಾನೆ. ಸೈರನ್ ಹೊಡೆಯುತ್ತ ರಸ್ತೆಯಲ್ಲಿ ವೇಗವಾಗಿ ಬಂದ ಅಂಬುಲೆನ್ಸ್‌ಗೆ ಸಂಚಾರ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡಿಕೊಟ್ಟಿದ್ದಾರೆ. ಆದರೆ ಅಂಬುಲೆನ್ಸ್ ಆಸ್ಪತ್ರೆ ಕಡೆಗೆ ಹೋಗದೇ, ಅಲ್ಲೇ ರಸ್ತೆ ಬದಿಯ ಹೋಟೆಲ್‌ವೊಂದರಲ್ಲಿ ನಿಲ್ಲಿಸಿದೆ. ಇದನ್ನೂ ಓದಿ: 3 ಸಾವಿರ ರೂ. ಮೌಲ್ಯದ 40 ಕೆ.ಜಿ. ಟೊಮೆಟೋ ಕಳ್ಳತನ- ದೂರು ದಾಖಲು
Advertisement
Advertisement
ಇದರಿಂದ ಅಚ್ಚರಿಗೊಂಡ ಟ್ರಾಫಿಕ್ ಪೊಲೀಸರು ಅಂಬುಲೆನ್ಸ್ ಬಳಿ ಹೋಗಿ ನೋಡಿದಾಗ, ಅಲ್ಲಿ ಯಾವ ರೋಗಿಯೂ ಇರಲಿಲ್ಲ. ಆದರೂ ಚಾಲಕ ಅಂಬುಲೆನ್ಸ್ ಸೈರನ್‌ನ್ನು ಸಕ್ರಿಯಗೊಳಿಸಿ ಚಲಾಯಿಸಿದ್ದ. ಆ ಮೂಲಕ ಸಂಚಾರ ನಿಯಮ ಉಲ್ಲಂಘಿಸಿದ್ದಾನೆ.
Advertisement
ಟ್ರಾಫಿಕ್ ಕ್ಲಿಯರ್ ಮಾಡಿದ ಬಳಿಕ ಅಂಬುಲೆನ್ಸ್ ಚಾಲಕ ನೇರವಾಗಿ ಹೋಟೆಲ್‌ವೊಂದರ ಬಳಿ ನಿಲ್ಲಿಸಿದ್ದಾನೆ. ನಂತರ ಒಂದಷ್ಟು ಸ್ನ್ಯಾಕ್ಸ್ ತೆಗೆದುಕೊಂಡಿದ್ದಾನೆ. ಈ ವೇಳೆ ಅಂಬುಲೆನ್ಸ್ ಕಡೆ ಹೋದ ಪೊಲೀಸರು, ಯಾವುದೇ ತುರ್ತು ಪರಿಸ್ಥಿತಿ ಇರಲಿಲ್ಲ. ಅಂಬುಲೆನ್ಸ್‌ನಲ್ಲಿ ಯಾವುದೇ ರೋಗಿ ಇರಲಿಲ್ಲ. ವಾಹನದಲ್ಲಿ ಇಬ್ಬರು ನರ್ಸ್‌ಗಳು ಮಾತ್ರ ಇದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಡಬಲ್ ಮರ್ಡರ್: ನಂಬಿಕೆ ದ್ರೋಹಿಗಳನ್ನ ಮುಗಿಸ್ತೀನಿ ಅಂತಾ ಸ್ಟೇಟಸ್ ಹಾಕಿದ್ದ ಹಂತಕ!
Advertisement
ಅಂಗಡಿಯಲ್ಲಿ ಚಾಲಕ ಸ್ನ್ಯಾಕ್ಸ್, ಜ್ಯೂಸ್ ಬಾಟೆಲ್ ತೆಗೆದುಕೊಂಡಿದ್ದಾನೆ. ಈ ಬಗ್ಗೆ ಪೊಲೀಸರು ವಿಚಾರಿಸಿದಾಗ, ನರ್ಸ್‌ವೊಬ್ಬರಿಗೆ ಆರೋಗ್ಯ ಸಮಸ್ಯೆ ಇದೆ ಎಂದು ಹೇಳುತ್ತಿರುವ ದೃಶ್ಯದ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.
ಈ ವೇಳೆ ಟ್ರಾಫಿಕ್ ಕಾನ್ಸ್‌ಟೇಬಲ್‌ವೊಬ್ಬರು ಡ್ರೈವರ್‌ಗೆ, ನೀನು ಸೈರನ್ ಹಾಕಿದ ಮೇಲೆ ನಾನು ಅಂಬುಲೆನ್ಸ್‌ಗೆ ಕ್ಲಿಯರೆನ್ಸ್ ಕೊಟ್ಟೆ. ಆದರೆ ಆಸ್ಪತ್ರೆಗೆ ಹೋಗದೆ ಮಿರ್ಚಿ ಬಜ್ಜಿ ತಿಂದು ಟೀ ಕುಡಿಯುತ್ತೀಯ.. ರೋಗಿ ಎಲ್ಲಿ? ಬಜ್ಜಿ ತಿನ್ನೋದಕ್ಕೆ ಸೈರನ್ ಆನ್ ಮಾಡಿದ್ದೀರಾ ಎಂದು ಪ್ರಶ್ನಿಸಿ, ಕ್ರಮದ ಎಚ್ಚರಿಕೆ ನೀಡಿದ್ದಾರೆ. ಈ ಎಲ್ಲಾ ಪ್ರಸಂಗವಾದ ಬಳಿಕ, ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಚಾಲಕನ ವಿರುದ್ಧ 1,000 ರೂ. ದಂಡ ವಿಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
Web Stories