ಹೈದರಾಬಾದ್: ಹೈದರಾಬಾದ್ ಪಶುವೈದ್ಯೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದಿದ್ದ ಆರೋಪಿಗಳನ್ನು ಪೊಲೀಸರು ಎನ್‍ಕೌಂಟರ್ ಮಾಡಿದ್ದಕ್ಕೆ ಅನೇಕರು ವಿರೋಧಿಸುತ್ತಿದ್ದಾರೆ. ಆದರೆ ಆರೋಪಿಗಳ ಪೈಕಿ ಓರ್ವನ ತಂದೆ, ಪೊಲೀಸರು ಮಾಡಿದ್ದನ್ನು ನಾನು ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪೊಲೀಸರು ಏನು ಮಾಡಿದ್ದಾರೋ ಅದನ್ನು ನಾನು ಒಪ್ಪುತ್ತೇನೆ. ಆರೋಪಿಗಳಿಗೆ ಸಾರ್ವಜನಿಕವಾಗಿ ಶಿಕ್ಷೆ ಕೊಡಬೇಕು, ಗಲ್ಲಿಗೆ ಏರಿಸಬೇಕು ಎಂಬ ಮಾತುಗಳು ಕೇಳಿ ಬಂದಿದ್ದವು. ಹೀಗಾಗಿ ಪೊಲೀಸರು ನಾಲ್ವರನ್ನೂ ಎನ್‍ಕೌಂಟರ್ ಮಾಡಿದ್ದಾರೆ ಎನ್ನುವುದು ನಮಗೆ ತಿಳಿದಿದೆ. ಆದರೆ ಅನೇಕ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಏಕೆ ಅದೇ ರೀತಿ ಮಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಎನ್‍ಕೌಂಟರ್ ಮಾಡುವ ಮೊದಲು ನೋಡಲು ಅವಕಾಶ ನೀಡಬೇಕಿತ್ತು: ಆರೋಪಿ ತಂದೆ
Advertisement
Advertisement
ಆದರೆ ಆರೋಪಿ ಚೆನ್ನಕೇಶವುಲು ಪತ್ನಿ ಪ್ರತಿಕ್ರಿಯಿಸಿ, ಪತಿಯನ್ನು ಕೊರೆದೊಯ್ದು ಹತ್ಯೆಗೈದವರನ್ನೂ ಕೊಲೆ ಮಾಡಿ. ಪತಿ ಇಲ್ಲದೆ ನಾನು ಹೇಗೆ ಬದುಕಲಿ. ನಾನು ಕೂಡ ಸಾಯುತ್ತೇನೆ ಎಂದು ಹೇಳಿದ್ದಾಳೆ.
Advertisement
ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಕಾರ್ತಿ ಚಿದಂಬರಂ, ಅತ್ಯಾಚಾರವು ಘೋರ ಅಪರಾಧ. ಇಂತಹ ಪ್ರಕರಣಗಳು ಕಾನೂನಿನ ನಿಬಂಧನೆಗಳ ಅಡಿಯಲ್ಲೇ ಇತ್ಯರ್ಥವಾಗಬೇಕು. ಈ ದುಷ್ಕೃತ್ಯದ ಆರೋಪಿಗಳ ಬಗ್ಗೆ ಬಗ್ಗೆ ನನಗೆ ಯಾವುದೇ ಅನುಕಂಪವಿಲ್ಲ. ಎನ್‍ಕೌಂಟರ್ ನಮ್ಮ ವ್ಯವಸ್ಥೆಗೆ ಕಳಂಕವಾಗಿದೆ. ತ್ವರಿತ ನ್ಯಾಯದ ಪ್ರಚೋದನೆಯನ್ನು ನಾನು ಅರ್ಥಮಾಡಿಕೊಂಡಿದ್ದರೂ, ಇದು ಸರಿಯಾದ ಮಾರ್ಗವಲ್ಲ ಎಂದು ಬರೆದುಕೊಂಡಿದ್ದಾರೆ.
Advertisement
ಕಾರ್ತಿ ಚಿದಂಬರಂ ಹೇಳಿಕೆ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ. ಅತ್ಯಾಚಾರಿಗಳನ್ನು ಅಷ್ಟೇ ಅಲ್ಲ ಭ್ರಷ್ಟ ರಾಜಕಾರಣಿಗಳನ್ನು ಎನ್‍ಕೌಂಟರ್ ಮಾಡಬೇಕು ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದಾರೆ. ಮತ್ತೊಬ್ಬರು ರಿಟ್ವೀಟ್ ಮಾಡಿ, ರಾಜಕಾರಣಿಯಾಗಿ ನೀವು ಹೇಳುತ್ತಿರುವುದು ಎಷ್ಟು ಸರಿ? ನಿಮ್ಮ ಕುಟುಂಬದವರಿಗೆ ಈ ರೀತಿ ಆಗಿದ್ದರೆ ಸುಮ್ಮನಿರುತ್ತಿದ್ದಿರಾ ಎಂದು ಪ್ರಶ್ನಿಸಿದ್ದಾರೆ.