ಹೈದರಾಬಾದ್: ಐಪಿಎಲ್ ಭಾಗವಾಗಿ ಹೈದರಾಬಾದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ ಕುಡಿದು ಅಸಭ್ಯವಾಗಿ ವರ್ತಿಸಿ, ಪಂದ್ಯ ವಿಕ್ಷೀಸಲು ಅಡ್ಡಪಡಿಸಿದ ಕಾರಣ ಯುವತಿ ಸೇರಿದಂತೆ 6 ಮಂದಿಯ ಮೇಲೆ ದೂರು ದಾಖಲಿಸಲಾಗಿದೆ.
ಹೈದರಾಬಾದ್ ಹಾಗೂ ಕೋಲ್ಕತ್ತಾ ನಡುವಿನ ಪಂದ್ಯ ವೇಳೆ ಘಟನೆ ನಡೆದಿದ್ದು, ಭರತ್ ಫೈನಾನ್ಸಿಯಲ್ ಇನ್ಕ್ಲೂಷನ್ ಲಿ. ಕಂಪೆನಿಯ ಉಪಾಧ್ಯಕ್ಷರಾದ ಸಂತೋಷ್ ಉಪಾಧ್ಯಾಯ್ ಎಂಬವರು ಉಪ್ಪಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆ್ಯಂಕರ್ ಪ್ರಶಾಂತಿ ಸೇರಿದಂತೆ ಕೆಲ ಯುವಕರು ಪಂದ್ಯ ನೋಡಲು ಅಡ್ಡಿ ಪಡಿಸಿ ದಾಂಧಲೆ ನಡೆಸಿದ್ದರು ಎಂದು ದೂರಿದ್ದಾರೆ.
Advertisement
ಪೊಲೀಸರು ಸದ್ಯ ಕೆ ಪೂರ್ಣಿಮ (27), ಕೆ ಪ್ರಿಯಾ (23), ಸಿ ಪ್ರಶಾಂತಿ (32), ವಿ ಶ್ರೀಕಾಂತ್ ರೆಡ್ಡಿ (48), ಎಲ್ ಸುರೇಶ್ (28), ಜಿ ವೇಣುಗೋಪಾಲ್ (38) ಎಂಬವರ ವಿರುದ್ಧ ಎಫ್‍ಐಆರ್ ದಾಖಲಿಸಿದೆ. ಕ್ರೀಡಾಂಗಣದ ಬಾಕ್ಸ್ ನಂ.22ರಲ್ಲಿ ಘಟನೆ ನಡೆದಿದ್ದು, ಐಪಿಸಿ ಸೆಕ್ಷನ್ 341, 188, 506 ಮತ್ತು 70(ಬಿ) ಅಡಿ ದೂರು ದಾಖಲಾಗಿದೆ.
Advertisement
Hyderabad: 6 persons including Telugu TV actor Prashanthi booked for creating nuisance & obstructing a person from watching IPL match at Uppal stadium. Complainant said accused didn't allow him to watch match & also abused & threatened him with dire consequences. Probe underway pic.twitter.com/89tvvakFt3
— ANI (@ANI) April 22, 2019