ಬಾಗಲಕೋಟೆ: ಮಾಜಿ ಸಚಿವ ಎಚ್.ವೈ. ಮೇಟಿ ಅವರನ್ನು ಏರ್ ಅಂಬುಲೆನ್ಸ್ ಮೂಲಕ ಬೆಂಗಳೂರಿಗೆ ರವಾನಿಸಲಾಗಿದೆ.
ಬಾಗಲಕೋಟೆಯ ನವನಗರದ ಹೆಲಿಪ್ಯಾಡ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನವೆಂಬರ್ 25ರಂದು ಎಚ್.ವೈ ಮೇಟಿ ಅವರು ಕಿಡ್ನಿ ಸ್ಟೋನ್ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಕೆಲವು ದಿನಗಳಿಂದ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಸ್ಟೋನ್ ಗಾತ್ರ 60 ಎಂಎಂ ಇದ್ದಿದ್ದರಿಂದ ನೋವು ತಾಳಲಾರದೇ ಮೇಟಿ ತೀವ್ರ ಅಸ್ವಸ್ಥಗೊಂಡಿದ್ದಾರೆ.
Advertisement
Advertisement
ಆರೋಗ್ಯದಲ್ಲಾದ ಏರುಪೇರಿನಿಂದ ವಿಪರೀತ ಕಫ ಆಗಿದ್ದು, ಮೇಟಿಯವರಿಗೆ ವಾಂತಿ, ಬೇದಿಯೂ ಶುರುವಾಗಿತ್ತು. ಹೀಗಾಗಿ ಮೇಟಿಯವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸುವಂತೆ ಬಾಗಲಕೋಟೆ ವೈದ್ಯರು ಕುಟುಂಬಸ್ಥರಿಗೆ ಸಲಹೆ ನೀಡಿದ್ದರು.
Advertisement
Advertisement
ವೈದ್ಯರ ಸಲಹೆ ಬೆನ್ನಲ್ಲೇ ಕುಟುಂಬಸ್ಥರು ಏರ್ ಅಂಬುಲೆನ್ಸ್ ಮೂಲಕ ಮೇಟಿ ಅವರನ್ನು ಬೆಂಗಳೂರಿಗೆ ರವಾನಿಸಿದ್ದಾರೆ. ಕಿಡ್ನಿ ಸ್ಟೋನ್‍ನಿಂದ ಮಾಜಿ ಸಚಿವರು ಬಳಲುತ್ತಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.