– ವಾಟ್ಸಪ್ ಗ್ರೂಪಿನಲ್ಲಿದ್ದಾರೆ ಪತ್ನಿಯರು
ಕೊಟ್ಟಾಯಂ: ರತಿಕ್ರೀಡೆಗಾಗಿ ಕೇರಳದಲ್ಲಿ ಪತಿಯರು ತಮ್ಮ ಪತ್ನಿಯರನ್ನೇ ಅದಲುಬದಲು ಮಾಡುವ ಜಾಲ ಈಗ ಪತ್ತೆಯಾಗಿದೆ. ಈ ಜಾಲವನ್ನು ಪೊಲೀಸರು ಬೇದಿಸಿದ್ದು, ಏಳು ಆರೋಪಿಗಳನ್ನು ಬಂಧಿಸಿದ್ದಾರೆ.
ಲೈಂಗಿಕ ಆಸೆಗೆ ತನ್ನ ವಾಂಛೆ ತೀರಿಸಿಕೊಳ್ಳಲು ಪತಿಯರು ಫೇಸ್‍ಬುಕ್, ವಾಟ್ಸಪ್ ಮತ್ತು ಟೆಲಿಗ್ರಾಮ್ ಮೀಡಿಯಾವನ್ನು ಬಳಸಿಕೊಂಡಿದ್ದಾರೆ. ಈ ಮೂಲಕ ತಮ್ಮ ಪತ್ನಿಯರನ್ನು ಪತಿಯರು ಅದಲುಬದಲು ಮಾಡಿಕೊಳ್ಳಲು ಒಪ್ಪಿಕೊಂಡು, ತಮ್ಮ ಪತ್ನಿಯರನ್ನು ಬೇರೆಯವರ ಜೊತೆ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ. ಈ ಕೃತ್ಯಕ್ಕೆ ಎಷ್ಟೋ ಹೆಣ್ಣು ಮಕ್ಕಳನ್ನು ಬಲಿಯಾಗಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಂ ಮನುಷ್ಯನಿಗೆ ಹಂದಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ
Advertisement
Advertisement
5 ಸಾವಿರ ಜನ ಸಕ್ರಿಯ:
ಈ ಜಾಲವನ್ನು ಪೊಲೀಸರು ಮೊದಲು ಹುಡುಕಿಕೊಂಡು ಹೋಗಿದ್ದು, ಮೂಲವನ್ನು ನೋಡಿ ಅವರೇ ಶಾಕ್ ಆಗಿದ್ದಾರೆ. ತನಿಖೆ ಪ್ರಾರಂಭಿಸಿದ ಪೊಲೀಸರು ಈ ಕುರಿತು ಆಳವಾಗಿ ಇಳಿದಿದ್ದು, ಈ ಕಾಮುಕರ ಗುಂಪಿನಲ್ಲಿ 5 ಸಾವುರಕ್ಕೂ ಹೆಚ್ಚು ಜವರು ಇರುವುದು ತಿಳಿದುಬಂದಿದೆ. ಈ ಗುಂಪಿನಲ್ಲಿ ಕೇವಲ ಕೇರಳ ಜನರು ಮಾತ್ರವಲ್ಲ, ಬದಲಾಗಿ ಈ ನೂರಾರು ಗುಂಪುಗಳು ಹಲವು ರಾಜ್ಯಗಳಲ್ಲಿವೆ. ಅದರಲ್ಲಿಯೂ ಕೆಲವು ಗುಂಪುಗಳಲ್ಲಿ 5000ಕ್ಕೂ ಹೆಚ್ಚಿನ ಜನರು ಇದ್ದಾರೆ.
Advertisement
ಆ ಗುಂಪಿನಲ್ಲಿ ವಕೀಲರು, ವೈದ್ಯರು ಸೇರಿದಂತೆ ಪ್ರತಿಷ್ಠಿತ ವೃತ್ತಿ ಮಾಡುತ್ತಿರುವ ಹಲವು ಜನರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಅದು ಅಲ್ಲದೇ ಈ ಗುಂಪಿನಲ್ಲಿ ಗಂಡು ಮಕ್ಕಳು ಮಾತ್ರವಿಲ್ಲ. ಹೆಣ್ಣು ಮಕ್ಕಳು ಸಹ ಇದ್ದು, ಅವರೇ ಸ್ವಯಂ ಪ್ರೇರಣಿಯಿಂದ ಈ ಗುಂಪಿಗೆ ಬಂದು ಸೇರಿಕೊಂಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
Advertisement
ಈ ಗುಂಪಿಗೆ ಸೇರಿದ ಕೆಲವು ಪತಿಯರು ಪ್ರೇರಣೆಗೊಂಡು ತಮ್ಮ ಪತ್ನಿಯರಿಗೆ ಬಲವಂತ ಮಾಡಿ ಈ ಗುಂಪಿಗೆ ಸೇರಿಸುವವರು ಇದ್ದಾರೆ. ಕೆಲವರ ಕುಟುಂಬ ಈ ಕಾರಣಕ್ಕೆ ಛಿದ್ರವಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.
ಏನಿದು?
ಅತೀಯಾದ ಲೈಂಗಿಕ ಆಸೆಗೆ ಬಿದ್ದು, ಈ ಗುಂಪಿಗೆ ಜನರು ಸೇರಿಕೊಳ್ಳುತ್ತಾರೆ. ಹೀಗೆ ಸೇರಿಕೊಳ್ಳುವ ಪತಿ-ಪತ್ನಿ ಪರಸ್ಪರ ಒಪ್ಪಿಕೊಂಡು ತಾತ್ಕಾಲಿಕವಾಗಿ ತಮ್ಮ ಸಂಗಾತಿಗಳನ್ನು ಬೇರೆಯವರ ಜೊತೆ ಬದಲು ಮಾಡಿಕೊಳ್ಳುತ್ತಾರೆ. ಆಗ ಅವರಿಗೆ ಸಿಕ್ಕ ಸಂಗಾತಿಯ ಜೊತೆ ಮೋಜು, ಮಸ್ತಿ ಮಾಡುವುದು, ಅನೈಸರ್ಗಿಕವಾಗಿ ಲೈಂಗಿಕ ಸಂಪರ್ಕ ಹೊಂದುವುದು ಈ ಗುಂಪಿನ ಸದಸ್ಯರ ಕೆಲಸವಾಗಿರುತ್ತೆ. ಇದನ್ನೂ ಓದಿ: ಮಕರ ಸಂಕ್ರಾಂತಿಗೆ ಗಾಳಿಪಟ ಹಾರಿಸೋದೇಕೆ? ವಿಶೇಷತೆ ಏನು?
ಈ ಕುರಿತು ಮಾತನಾಡಿದ ಕೇರಳದ ಹಿರಿಯ ಪೊಲೀಸ್ ಅಧಿಕಾರಿ, ಈ ಕೆಲಸಕ್ಕೆ ಗಂಡಸರು ಸುಲಭವಾಗಿ ಹೊಂದಿಕೊಳ್ಳುತ್ತಾರೆ. ಆದರೆ ಮಹಿಳೆಯರು ಇದನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತೆ. ಈ ಕಾರಣದಿಂದ ಶೇ.90 ರಷ್ಟು ಪತ್ನಿಯರು ಇಷ್ಟವಿಲ್ಲದೇ ಈ ಕೃತ್ಯಕ್ಕೆ ಒಪ್ಪಿಕೊಳ್ಳುತ್ತಾರೆ. ಇನ್ನು ಕೆಲವು ಪತಿಯರು ಈ ಕೃತ್ಯಕ್ಕೆ ಬಲವಂತವಾಗಿ ತಮ್ಮ ಪತ್ನಿಯರನ್ನು ಒಪ್ಪಿಸುತ್ತಾರೆ. ಅದಕ್ಕೆ ಕೆಲವು ಮಹಿಳೆಯರು ಈ ಕೃತ್ಯಕ್ಕೆ ಕಟ್ಟುಬಿದ್ದು, ಈ ಜಾಲಕ್ಕೆ ಸೇರುತ್ತಾರೆ. ಅದಕ್ಕೆ ಈ ಬಗ್ಗೆ ಸರಿಯಾಗಿ ತನಿಖೆ ಮಾಡಿ ಗುಂಪನ್ನು ಮಟ್ಟಹಾಕುವ ಅಗತ್ಯವಿದೆ ಎಂದು ತಿಳಿಸಿದರು.
ಬಯಲಾಗಿದ್ದು ಹೇಗೆ?
ಇದೇ ರೀತಿ ಒಬ್ಬ ಪತಿ ತನ್ನ ಪತ್ನಿಯನ್ನು ಬೇರೆಯವರ ಜೊತೆ ಹಂಚಿಕೊಳ್ಳಲು ಸಿದ್ಧವಾಗಿದ್ದು, ಈ ಸುದ್ದಿ ತಿಳಿಸಿದ ಪತ್ನಿ ಶಾಕ್ ಆಗಿದ್ದಾಳೆ. ಪರಿಣಾಮ ಆಕೆ ಪೊಲೀಸರಿಗೆ ದೂರು ಕೊಟ್ಟಿದ್ದು, ಪೊಲೀಸರು ಇವರ ಜಾಲ ಬೇಧಿಸಿದ್ದಾರೆ.