ಬೆಂಗಳೂರು: ಪತ್ನಿ ಗಂಡು ಮಗು ಹೆರಲಿಲ್ಲ ಎಂದು ಗಂಡನೇ ಹೆಂಡತಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ಆನೇಕಲ್ ಕೊಪ್ಪಗೆಟ್ ಬಳಿ ನಡೆದಿದೆ.
ವೀಣಾ (27) ಗಂಡನಿಂದ ಕೊಲೆಯಾದ ದುರ್ದೈವಿ. ಮಾರ್ಚ್ ತಿಂಗಳ 28 ರಂದು ತನ್ನ ಮನೆಗೆ ಆಕಸ್ಮಿಕ ಬೆಂಕಿ ಬಿದ್ದು ಪತ್ನಿ ಬೆಂಕಿಗೆ ಸಾವನ್ನಪ್ಪಿದ್ದಾಳೆ ಎಂದು ವೀಣಾಳ ಪತಿ ಶಶಿಕುಮಾರ್ ಕಥೆ ಕಟ್ಟಿದ್ದನು.
Advertisement
Advertisement
ಆದರೆ ವೀಣಾಳ ಪೋಷಕರು ಮಗಳ ಸಾವು ಕೊಲೆಯೆಂದು ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಶಶಿಕುಮಾರ್ ಗಂಡು ಮಗು ಹೇರಲಿಲ್ಲ ಎಂದು ವೀಣಾಗೆ ಬೆಂಕಿ ಹಚ್ಚಿ ಕೊಂದಿದ್ದಾನೆ ಎಂದು ಆರೋಪಿಸಿದ್ದಾರೆ.
Advertisement
ವೀಣಾ ಹಾಗೂ ಶಶಿಕುಮಾರ್ ಮದುವೆಯಾಗಿ 7 ವರ್ಷವಾಗಿದ್ದು, ಇವರಿಗೆ ಸಂಜನಾ ಹಾಗೂ ರುಚಿತಾ ಎಂಬ ಎರಡು ಹೆಣ್ಣುಮಕ್ಕಳಿದ್ದಾರೆ. ಆದರೆ ಗಂಡು ಮಗು ಹೆರಲಿಲ್ಲ ಎಂದು ನಿತ್ಯವೂ ಶಶಿಕುಮಾರ್ ವೀಣಾಗೆ ಕಿರುಕುಳ ನೀಡುತ್ತಿದ್ದ ಎಂದು ವೀಣಾ ಪೋಷಕರು ತಿಳಿಸಿದ್ದಾರೆ.