CrimeDharwadDistrictsKarnatakaLatestMain Post

ಪತ್ನಿಯ ಪ್ರಿಯಕರನಿಂದ ಗಂಡನ ಕೊಲೆ

ಧಾರವಾಡ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯ ಪ್ರಿಯಕರನಿಂದ ಗಂಡ ಕೊಲೆಯಾದ ಘಟನೆ ಧಾರವಾಡದಲ್ಲಿ ನಡೆದಿದೆ.

ಭೀಮಪ್ಪ ಸಿದ್ದಪ್ಪ ಕರಿಸಿದ್ದನ್ನವರ (30) ಕೊಲೆಯಾದ ವ್ಯಕ್ತಿ. ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಭೀಮಪ್ಪನ ಪತ್ನಿಯು ಶಿವು ಲಿಂಬೋಜಿ ಅವರೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದರು. ಭಿಮಪ್ಪನ ಪತ್ನಿ ಮತ್ತು ಶಿವು ನಿಂಬೋಜಿ ಇಬ್ಬರು ಪ್ರೀತಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಶಿವು ನಿಂಬೋಜಿ, ಭಿಮಪ್ಪನನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಆಮ್ಲೆಟ್ ಸೀದು ಹೋಗಿದೆ ಎಂದಿದ್ದಕೆ ಬಿಸಿ ಬಾಣಲೆಯಿಂದ ಹೊಡೆದ ಹೋಟೆಲ್ ಮಾಲೀಕ

ಪ್ರಕರಣವನ್ನು ಗರಗ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published.

Back to top button