ಹೈದರಾಬಾದ್: ಪತಿಯೊಬ್ಬ ಪ್ರತಿದಿನ ಟಿಕ್ ಟಾಕ್ ಮಾಡುತ್ತಿದ್ದ ಪತ್ನಿಯನ್ನು ಕೊಲೆ ಮಾಡಿದ ಘಟನೆ ಬುಧವಾರ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ವಿಜಯವಾಡದಲ್ಲಿ ನಡೆದಿದೆ.
ಫಾತಿಮಾ (30) ಕೊಲೆಯಾದ ಪತ್ನಿ. ಫಾತಿಮಾ ಪ್ರತಿದಿನ ಟಿಕ್ ಟಾಕ್ ವಿಡಿಯೋ ಮಾಡುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದಳು. ಪತ್ನಿಯ ಈ ಹವ್ಯಾಸದಿಂದ ಬೇಸತ್ತ ಪತಿ ಚಿನ್ನಪಾಚು ಸಾಹಿಬ್ ಆಕೆಯನ್ನು ಕೊಲೆ ಮಾಡಿದ್ದಾನೆ. ಅಕ್ಟೋಬರ್ 27ರಂದು ಫಾತಿಮಾ ಕಾನಿಗಿರಿಯಲ್ಲಿ ಇರುವ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಮೊದಲು ಪೊಲೀಸರು ಇದು ಆತ್ಮಹತ್ಯೆ ಎಂದುಕೊಂಡಿದ್ದರು. ಬಳಿಕ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸತ್ಯ ಬೆಳಕಿಗೆ ಬಂದಿದೆ.
Advertisement
Advertisement
ಮರಣೋತ್ತರ ವರದಿ ಪ್ರಕಾರ, ಫಾತಿಮಾ ಸೀರೆಯಿಂದ ಉಸಿರುಗಟ್ಟಿ ಸಾಯಲಿಲ್ಲ ಬದಲಾಗಿ ಯಾರೋ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂಬುದು ತಿಳಿದು ಬಂತು. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ತನಿಖೆ ನಡೆಸಲು ಶುರು ಮಾಡಿದ್ದರು. ಮೊದಲು ಪೊಲೀಸರು ಮಹಿಳೆ ಕುಟುಂಬಸ್ಥರಿಗೆ ಹಾಗೂ ಅವರ ಸಂಬಂಧಿಕರಿಗೆ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಹಿಳೆಯ ಕುಟುಂಬಸ್ಥರು, ಫಾತಿಮಾ ಪ್ರತಿದಿನ ಟಿಕ್ ಟಾಕ್ ವಿಡಿಯೋ ಮಾಡುವುದು ಚಿನ್ನಪಾಚು ಸಾಹೀಬ್ಗೆ ಇಷ್ಟವಿಲ್ಲ. ಈ ವಿಷಯಕ್ಕಾಗಿ ಇಬ್ಬರು ಜಗಳವಾಡುತ್ತಿದ್ದರು ಎಂದು ಪೊಲೀಸರ ಬಳಿ ತಿಳಿಸಿದ್ದಾರೆ.
Advertisement
Advertisement
ಪೊಲೀಸರು ತನ್ನನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ವಿಷಯ ತಿಳಿದ ಚಿನ್ನಪಾಚು ಮನೆ ಬಿಟ್ಟು ಓಡಿ ಹೋಗುತ್ತಾನೆ. ಬಳಿಕ ಪೊಲೀಸರು ಆತನ ಅಂಗಡಿ ಬಳಿ ಹೋಗಿ ಆತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಚಿನ್ನಪಾಚು ತನ್ನ ಪತ್ನಿ ಫಾತಿಮಾಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಟಿಕ್ ಟಾಕ್ ವಿಷಯವಾಗಿ ನನ್ನ ಹಾಗೂ ಫಾತಿಮಾ ನಡುವೆ ಯಾವಾಗಲೂ ಜಗಳ ನಡೆಯುತ್ತಿತ್ತು. ಆಕೆಯ ಹವ್ಯಾಸದಿಂದ ಕೋಪಗೊಂಡು ಲಟ್ಟಣಿಗೆಯಿಂದ ಹೊಡೆದೆ ಎಂದು ಚಿನ್ನಪಾಚು ಪೊಲೀಸರ ಬಳಿ ತಿಳಿಸಿದ್ದಾನೆ. ಸದ್ಯ ಪೊಲೀಸರು ಆರೋಪಿ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.