ಹೈದರಾಬಾದ್: ಬೇರೆಯವರಿಗೆ ಭಾರವಾಗಿರಲು ಇಷ್ಟವಿಲ್ಲ ಎಂದು ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ರಂಗಾರೆಡ್ಡಿಯಲ್ಲಿ ನಡೆದಿದೆ.
ವೆಂಕಟ್‍ರೆಡ್ಡಿ ಹಾಗೂ ನಿಖಿತಾ ಆತ್ಮಹತ್ಯೆ ಮಾಡಿಕೊಂಡ ದಂಪತಿ. ದಂಪತಿ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಇದರಿಂದ ಬೇಸತ್ತ ಅವರು ಬೇರೆಯವರಿಗೆ ಭಾರವಾಗಬಾರದು ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ.
Advertisement
Advertisement
ಕೆಲವು ದಿನಗಳ ಹಿಂದೆ ದಂಪತಿ ಬಿ.ಎಂ ನಗರದ ಬಾಡಿಗೆ ಮನೆಯಲ್ಲಿ ಶಿಫ್ಟ್ ಆಗಿದ್ದರು. ವೆಂಕಟ್ ರೆಡ್ಡಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೆ ವೆಂಕಟ್‍ರೆಡ್ಡಿ ಕುಟುಂಬ ಕೆಲವು ದಿನಗಳಿಂದ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಇದರಿಂದ ಬೇಸತ್ತ ಪತಿ-ಪತ್ನಿ ಡೆತ್‍ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement
ನಮಗೆ ನಮ್ಮ ಜೀವನದಿಂದ ಜಿಗುಪ್ಸೆ ಬಂದಿದೆ. ಹಾಗಾಗಿ ನಾವು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದೇವೆ. ನಮ್ಮ ಮಗನನ್ನು ಚೆನ್ನಾಗಿ ಬೆಳೆಸಿ. ನಮ್ಮ ಈ ನಿರ್ಧಾರದಿಂದ ಬೇರೆಯವರು ದುಃಖಪಡುವ ಅವಶ್ಯಕತೆ ಇಲ್ಲ ಎಂದು ಡೆತ್‍ನೋಟ್ ನಲ್ಲಿ ಬರೆದಿದ್ದಾರೆ.
Advertisement
ಡೆತ್‍ನೋಟ್ ಬರೆದ ನಂತರ ವೆಂಕಟ್‍ರೆಡ್ಡಿ ಹಾಗೂ ನಿಖಿತಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.