ಜನಪ್ರಿಯ ಟೆಲಿವಿಷನ್ ನಟ, ಬಾಲ ಕಲಾವಿದನಾಗಿಯೂ ಫೇಮಸ್ ಆಗಿದ್ದ ಲೋಕೇಶ್ ರಾಜೇಂದ್ರನ್ (Lokesh Rajendran) ಆತ್ಮಹತ್ಯೆಗೆ ಶರಣಾಗಿದ್ದಾರೆ. 34 ವರ್ಷದ ಈ ತಮಿಳು (Tamil) ಕಿರುತೆರೆ ನಟನ ಆತ್ಮಹತ್ಯೆಗೆ (Suicide) ಕೌಟುಂಬಿಕ ಕಲಹವೇ ಕಾರಣ ಎಂದಿದ್ದಾರೆ ಲೋಕೇಶ್ ತಂದೆ ರಾಜೇಂದ್ರನ್. ನನ್ನ ಸೊಸೆ ಹಾಗೂ ಮಗನ ನಡುವೆ ಕೆಲವು ತಪ್ಪು ತಿಳುವಳಿಕೆಗಳು ಇದ್ದವು. ಈ ಕಾರಣದಿಂದಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.
Advertisement
ಮರ್ಮದೇಶಂ ಧಾರಾವಾಹಿಯ ಮೂಲಕ ಬಾಲ ಕಲಾವಿದನಾಗಿ (Child Actor) ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದ ಲೋಕೇಶ್, 150ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ನಾಲ್ಕು ದಿನಗಳ ಹಿಂದೆಯೇ ಪತ್ನಿಯಿಂದಲೇ ವಿಚ್ಛೇದನಕ್ಕೆ (Divorce) ಲೀಗಲ್ ನೋಟಿಸ್ ಬಂದಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಅವರ ತಂದೆ ತಿಳಿಸಿದ್ದಾರೆ. ಇದನ್ನೂ ಓದಿ:ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಮೂರು ದಿನದ ಗಳಿಕೆ 230 ಕೋಟಿಗೂ ಅಧಿಕ
Advertisement
Advertisement
ಮಧ್ಯಮಗಳ ಜೊತೆ ಮಾತನಾಡಿರುವ ಲೋಕೇಶ್ ತಂದೆ, ಕಳೆದ ಶುಕ್ರವಾರವಷ್ಟೇ ಮಗನನ್ನು ಮಾತನಾಡಿಸಿದ್ದೇನೆ. ಅವರು ನನ್ನ ಬಳಿ ಹಣ ಕೇಳಿದರು. ಮಗನಿಗಾಗಿ ನಾನೂ ಹಣ ಕಳುಹಿಸಿದ್ದೆ. ಈಗ ನೋಡಿದರೆ, ಮಗನೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾರೆ. ನನ್ನ ಮಗ ಕಿರುತೆರೆಯಲ್ಲಿ ಮಾತ್ರವಲ್ಲ, 15 ಸಿನಿಮಾಗಳಲ್ಲೂ ಲೋಕೇಶ್ ನಟಿಸಿದ್ದಾರೆ. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.