– ಮಹಿಳೆ ಅರೆಸ್ಟ್, ಪ್ರಿಯಕರ ಎಸ್ಕೇಪ್
ಲಕ್ನೋ: ಮಹಿಳೆಯೊಬ್ಬಳು ತನ್ನ ಪ್ರಿಯತಮನ ಜೊತೆ ಸೇರಿಕೊಂಡು ಪತಿಯನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ವಿಕ್ರಮ್ ಠಾಕೂರ್ (22) ಮೃತ ವ್ಯಕ್ತಿ. ಆರೋಪಿ ಪತ್ನಿ ರವೀನಾ ತನ್ನ ಪ್ರಿಯಕರ ಪ್ರತಾಪ್ ಜೊತೆ ಸೇರಿಕೊಂಡು ಕೊಲೆ ಮಾಡಿದ್ದಾಳೆ. ಸದ್ಯಕ್ಕೆ ಪೊಲೀಸ್ ಆರೋಪಿ ಪತ್ನಿಯನ್ನು ಬಂಧಿಸಿದ್ದು, ಪ್ರಿಯಕರ ಪ್ರತಾಪ್ಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.
Advertisement
ಆಗ್ರಾದ ಬರ್ಹನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಖಂಡಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತ ಠಾಕೂರ್ ನೋಯ್ಡಾದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಈತನ ಪತ್ನಿ ರವೀನಾ ತನ್ನ ಸೋದರ ಸಂಬಂಧಿ ಪ್ರತಾಪ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಪೊಲೀಸರು ತಿಳಿದಿದ್ದಾರೆ.
Advertisement
Advertisement
ಒಂದು ವಾರದ ಹಿಂದೆ ವಿಕ್ರಮ್ ಠಾಕೂರ್ ತನ್ನ ಪತ್ನಿ ರವೀನಾ ಮತ್ತು ಒಂದೂವರೆ ವರ್ಷದ ಮಗನೊಂದಿಗೆ ತಮ್ಮ ಗ್ರಾಮಕ್ಕೆ ಹೋಗಿದ್ದರು. ಆದರೆ ಅಲ್ಲಿ ರವೀನಾ ಮತ್ತು ಪ್ರತಾಪ್ ಸೇರಿಕೊಂಡು ಠಾಕೂರ್ ನನ್ನು ಕೊಲೆ ಮಾಡಿದ್ದಾರೆ. ತನ್ನ ಪತಿಯನ್ನು ಕೊಲೆ ಮಾಡಲು ಆರೋಪಿ ತನ್ನ ಪ್ರಿಯಕರ ಪ್ರತಾಪ್ ಸಹಾಯವನ್ನು ಪಡೆದುಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
Advertisement
ಸದ್ಯಕ್ಕೆ ಪೊಲೀಸರು ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಠಾಕೂರ್ ಕೊಲೆ ಮಾಡಲು ಮೊದಲೇ ಪ್ಲಾನ್ ಮಾಡಲಾಗಿತ್ತು. ಇಬ್ಬರು ಆರೋಪಿಗಳ ಫೋನ್ ವಿವರಗಳನ್ನು ಪರಿಶೀಲನೆ ಮಾಡಿದ್ದು, ಇಬ್ಬರೂ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಠಾಕೂರ್ ನ ಕತ್ತನ್ನು ಸೀಳಿ ಕೊಲೆ ಮಾಡಲಾಗಿದೆ. ಸದ್ಯಕ್ಕೆ ನಾವು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ಮಹೇಂದ್ರ ಸಿಂಗ್ ಯಾದವ್ ಹೇಳಿದ್ದಾರೆ.
ಈ ಕುರಿತು ಐಪಿಸಿ ಅಡಿಯಲ್ಲಿ ರವೀನಾ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಆರೋಪಿ ಪ್ರತಾಪ್ ಪರಾರಿಯಾಗಿದ್ದು, ರವೀನಾಳನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ರವೀನಾ ಯಾವುದೇ ವಿಚಾರವನ್ನು ಬಹಿರಂಗಪಡಿಸಿಲ್ಲ. ಹೀಗಾಗಿ ಆರೋಪಿ ಪ್ರತಾಪ್ನನ್ನು ಬಂಧಿಸಿದ ನಂತರ ನಡೆದ ಘಟನೆಯ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಯಾದವ್ ತಿಳಿಸಿದರು.