ಭೋಪಾಲ್: ಕೌಟುಂಬಿಕ ಕಲಹದ ಮಧ್ಯೆ ಕೋಪಗೊಂಡ ಪತಿ ಪತ್ನಿಯ ಮೂಗು ಕಚ್ಚಿರುವ ಘಟನೆ ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ನಡೆದಿದೆ.
ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡ ಅಲೋಟೆ ಪೊಲೀಸ್ ಠಾಣೆಯ ನೀರಜ್ ಸರ್ವಾನ್, ದಿನೇಶ್ ಹಾಗೂ ಟೀನಾ 2008ರಲ್ಲಿ ಉಜ್ಜನಿಯಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದನ್ನೂ ಓದಿ: ಪ್ರತಿಭಟನೆ ನಡೆದರೂ ಚಿಕ್ಕಬಳ್ಳಾಪುರದಲ್ಲಿ KSRTC ಬಸ್ಸುಗಳಿಗೆ ಇಲ್ಲ ಬಂದ್
ವಿಚಾರಣೆ ವೇಳೆ ಟೀನಾ, ನನ್ನ ಪತಿ ನಿರುದ್ಯೋಗಿ ಮತ್ತು ಮದ್ಯವ್ಯಸನನಾಗಿದ್ದು, ಮದುವೆಯಾದ ತಕ್ಷಣ ನಾನು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದೆ. ದಿನೇಶ್ ಕಿರುಕುಳ ತಾಳಾಲಾರದೇ ನನ್ನ ಹೆಣ್ಣುಮಕ್ಕಳೊಂದಿಗೆ ತಾಯಿಯ ಮನೆಗೆ ಹೋಗಿ ಅಡುಗೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೆ. 2019ರಲ್ಲಿ ನನ್ನ ಪತಿಯಿಂದ ವಿಚ್ಛೇದನೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದೆ.
ಆದರೆ ಇತ್ತೀಚೆಗಷ್ಟೇ ದಿನೆಶ್ ತನ್ನ ಪೋಷಕರ ಮನೆಗೆ ಭೇಟಿ ನೀಡಿ ಈ ವಿಚಾರವಾಗಿ ಚರ್ಚೆ ನಡೆಸಿದರು. ಈ ವೇಳೆ ಮಾತಿಗೆ ಮಾತು ಬೆಳೆದು ತೀವ್ರ ವಾಗ್ವಾದದಿಂದ ದಿನೇಶ್ ಪುತ್ರಿಯರ ಮುಂದೆಯೇ ನನ್ನ ಮೇಲೆ ಹಲ್ಲೆ ನಡೆಸಿ ಹಲ್ಲಿನಿಂದ ಮೂಗನ್ನು ಕಚ್ಚಿದ್ದಾರೆ. ನಂತರ ತೀವ್ರವಾಗಿ ರಕ್ತಸ್ರಾವವಾಗುತ್ತಿರುವುದನ್ನು ಕಂಡು ಸ್ಥಳದಿಂದ ಪಾರಾರಿಯಾಗಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತರಕಾರಿ ಸುರಿದು ರೈತರ ಆಕ್ರೋಶ – ಜಿಲ್ಲೆಗಳಲ್ಲಿ ಪ್ರತಿಭಟನೆ ಆರಂಭ
ಈ ವೇಳೆ ಮಕ್ಕಳು ಕಿರುಚಾಡಿದ್ದನ್ನು ಕೇಳಿಸಿಕೊಂಡ ನೆರೆಹೊರೆಯವರು ಟೀನಾರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದೀಗ ಟೀನಾಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಮತ್ತು ಟೀನಾ ಪತಿ ದಿನೇಶ್‍ರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.