ಹಾಸನ: ಪತ್ನಿಯ ಅಶ್ಲೀಲ ವಿಡಿಯೋ ವೈರಲ್ ಮಾಡಿದ್ದಕ್ಕೆ ಪತಿಯೊಬ್ಬ ಪ್ರಿಯಕರ ಹಾಗೂ ಆತನ ತಂದೆಯನ್ನು ಕೊಲೆ ಮಾಡಿದ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಗುಡ್ಡದ ಕೆಂಗನಹಳ್ಳಿಯಲ್ಲಿ ನಡೆದಿದೆ.
ಮಂಜುನಾಥ್(30) ಹಾಗೂ ಆತನ ತಂದೆ ಕೊಲೆಯಾದ ದುರ್ದೈವಿಗಳು. ಕೃಷ್ಣಪ್ಪ ಹಾಗೂ ಆತನ ಸಂಬಂಧಿಕರು ಜೋಡಿ ಕೊಲೆ ಆರೋಪಿಗಳಾಗಿದ್ದು, ಈ ಘಟನೆ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
Advertisement
Advertisement
ಕೃಷ್ಣಪ್ಪನ ಪತ್ನಿ ಜೊತೆ ಮಂಜುನಾಥ್ ಅಕ್ರಮ ಸಂಬಂಧ ಹೊಂದಿದ್ದನು ಎಂಬ ಆರೋಪ ಕೇಳಿ ಬರುತ್ತಿತ್ತು. ಅಲ್ಲದೆ ಆಕೆಯ ಅಶ್ಲೀಲ ದೃಶ್ಯಗಳನ್ನು ಮಂಜುನಾಥ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ ಎಂದು ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿದ್ದನು.
Advertisement
ಈ ವಿಷಯದಿಂದ ರೊಚ್ಚಿಗೆದ್ದ ಕೃಷ್ಣಪ್ಪ ಹಾಗೂ ಆತನ ಸಂಬಂಧಿಕರು ಬಡಿಗೆಯಿಂದ ಬಡಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ವೇಳೆ ಗಲಾಟೆ ಬಿಡಿಸಲು ಬಂದ ಮಂಜುನಾಥ್ ತಂದೆ ತಲೆಗೂ ಪೆಟ್ಟು ಬಿದ್ದು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.
Advertisement
ಈ ಬಗ್ಗೆ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.