ಮೈಸೂರು: ಮಹಿಳೆಯೊಬ್ಬಳು ಅನೈತಿಕ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ತನ್ನ ಪತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಚಿಕಿತ್ಸೆ ಫಲಕಾರಿಯಾಗದೇ ಪತಿ ಮೃತಪಟ್ಟಿದ್ದಾನೆ.
ಮಹಜರ್ ಪಾಷಾ(45) ಮೃತ ಪತಿ. ಈ ಘಟನೆ ಮೈಸೂರಿನ ಉದಯಗಿರಿಯ ಸತ್ಯಾನಗರದಲ್ಲಿ ನಡೆದಿದ್ದು, ಚಿಕಿತ್ಸೆ ಫಲಕಾರಿಯಾದೇ ಆಸ್ಪತ್ರೆಯಲ್ಲಿ ಪಾಷಾ ಮೃತಪಟ್ಟಿದ್ದಾನೆ. ಪತ್ನಿ ಮಮ್ತಾಜ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ ಎಂದು ಉದಯಗಿರಿ ಪೊಲೀಸರು ಆಕೆಯನ್ನು ಅರೆಸ್ಟ್ ಮಾಡಿದ್ದರು. ಆದರೆ ಈ ದಂಪತಿಯ ಮಕ್ಕಳು, ಅಮ್ಮ ಮಮ್ತಾಜ್ ತಂದೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎನ್ನುವುದು ಸುಳ್ಳು ಎನ್ನುತ್ತಿದ್ದಾರೆ.
ತಂದೆ ಕುಡಿದ ಮತ್ತಿನಲ್ಲಿ ಪೆಟ್ರೋಲ್ ಚೆಲ್ಲಾಡಿ ಸೀಗರೇಟ್ ಗೆ ಬೆಂಕಿ ಹಚ್ಚಿದಾಗ ಬೆಂಕಿ ಆವರಿಸಿದೆ. ಬಳಿಕ ಕುಡಿದ ಮತ್ತಿನಲ್ಲಿದ್ದ ತಂದೆ ಸುಳ್ಳು ಹೇಳಿದ್ದಾರೆ. ಇದೇ ಕಾರಣದಿಂದ ತಾಯಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ಮಕ್ಕಳು ಆರೋಪ ಮಾಡುತ್ತಿದ್ದಾರೆ.
ಏನಿದು ಪ್ರಕರಣ?
23 ವರ್ಷಗಳ ಹಿಂದೆ ಮಮ್ತಾಜ್ ಹಾಗೂ ಮಹಜರ್ ಪಾಷಾ ಮದುವೆಯಾಗಿದ್ದರು. ಈ ದಂಪತಿಗೆ ಒಟ್ಟು 6 ಮಕ್ಕಳಿದ್ದು, ಮಹಜರ್ ಪಾಷಾ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಪತಿ ಮಹಜರ್ ಪಾಷಾ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಅವರ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಇದರಿಂದ ಬೇಸತ್ತಿದ್ದ ಮಮ್ತಾಜ್ ರಾತ್ರಿ ಮಹಜರ್ ಮಲಗಿದ್ದ ವೇಳೆ ಮಮ್ತಾಜ್ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ ಎಂದು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಕೆಯನ್ನು ನ್ಯಾಯಾಂಗ ಬಂಧನದಲ್ಲಿರಿಸಿದ್ದರು. ಈಗ ಮಕ್ಕಳು ತಮ್ಮ ತಾಯಿ ಏನು ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv