ನವದೆಹಲಿ: ಆಕಾಶದಲ್ಲಿ ಹಾರಾಡುತ್ತಿದ್ದ ವಿಮಾನದಲ್ಲೇ (Flight) ಗಂಡ (Husband) ಹೆಂಡತಿ (Wife) ಗಲಾಟೆ ಆರಂಭಿಸಿ ಬೇರೆ ಪ್ರಯಾಣಿಕರಿಗೆ ತೊಂದರೆ ಕೊಟ್ಟ ಪರಿಣಾಮ ಸ್ವಿಟ್ಜರ್ಲೆಂಡ್‍ನ ಮ್ಯೂನಿಚ್‍ಯಿಂದ ಬ್ಯಾಂಕಾಕ್‍ಗೆ (Bangkok) ತೆರಳುತ್ತಿದ್ದ ವಿಮಾನವನ್ನು ದೆಹಲಿಯಲ್ಲಿ (Delhi) ಇಳಿಸಿದ ಘಟನೆ ನಡೆದಿದೆ.
ಪತಿ-ಪತ್ನಿಯ ನಡುವಿನ ಜಗಳಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಅವರಿಬ್ಬರ ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ವಿಮಾನದ ಸಿಬ್ಬಂದಿ ಆರಂಭದಲ್ಲಿ ಪಾಕಿಸ್ತಾನದಲ್ಲಿ ಇಳಿಯಲು ವಿನಂತಿಸಿದ್ದಾರೆ. ಪಾಕ್‍ನಲ್ಲಿ ವಿಮಾನ ಇಳಿಸಲು ಅನುಮತಿ ಸಿಗದ ಕಾರಣ ವಿಮಾನವನ್ನು ದೆಹಲಿಯಲ್ಲಿ ಇಳಿಸಲಾಯಿತು ಎಂದು ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜಪಾನ್ ಕರಾವಳಿ ತೀರದಲ್ಲಿ ಅಮೆರಿಕ ಸೇನಾ ವಿಮಾನ ಪತನ – 8 ಸಿಬ್ಬಂದಿ ದುರ್ಮರಣ
ಗಲಾಟೆಯ ನಂತರ ಮಹಿಳೆ ತನ್ನ ಗಂಡನಿಂದ ತನಗೆ ಬೆದರಿಕೆ ಇದೆ ಎಂದು ಪೈಲಟ್ ಬಳಿ ಹೇಳಿಕೊಂಡಿದ್ದು, ಸಹಾಯಕ್ಕಾಗಿ ಕೇಳಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಗಲಾಟೆ ಮಾಡಿದ ಇಬ್ಬರನ್ನು ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಅಕ್ಟೋಬರ್‍ನಲ್ಲಿ ಪ್ರಯಾಣಿಕನೊಬ್ಬ ದೆಹಲಿಗೆ ಹೋಗುವ ಈಜಿಪ್ಟ್ ಏರ್ ವಿಮಾನದಲ್ಲಿ ಕೆಲವು ಸೀಟುಗಳನ್ನು ಹಾನಿಗೊಳಿಸಿದ್ದ. ಅಲ್ಲದೇ ಸಹ ಪ್ರಯಾಣಿಕರೊಂದಿಗೆ ಜಗಳವಾಡಿದ್ದ. ಬಳಿಕ ಆತನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಇದನ್ನೂ ಓದಿ: 25 ದಿನಗಳಿಗೆ ಸಾಕಾಗುವಷ್ಟು ಆಹಾರ ಸುರಂಗದಲ್ಲೇ ಉಳಿದಿದೆ: ಕಾರ್ಮಿಕ ಅಖಿಲೇಶ್