ಚಿಕ್ಕಬಳ್ಳಾಪುರ: ಬರ್ತ್‍ಡೇ ಪಾರ್ಟಿ ವಿಚಾರವಾಗಿ ಗಂಡ, ಹೆಂಡತಿ ನಡುವೆ ಜಗಳ ನಡೆದಿದ್ದು, ಹೆಂಡತಿ ನಾಪತ್ತೆಯಾಗಿದ್ದಾಳೆ. ನಂತರ ಗಂಡನ ಫೇಸ್‍ಬುಕ್ ಖಾತೆಯಲ್ಲಿ ಹೆಂಡತಿ ಫೋಟೋಗೆ RIP ಅಂತ ಹಾಕಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಇನ್ನು ಈ ಪೋಸ್ಟ್ ಕಂಡು ಯುವತಿಯ ಪೋಷಕರು ಮಗಳನ್ನು ಹುಡುಕಿಕೊಂಡು ಗಂಡನ ಮನೆಗೆ ಬಂದಿದ್ದು, ಅಳಿಯನ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ.
Advertisement
ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಉದನಹಳ್ಳಿ ಗ್ರಾಮದಲ್ಲಿ ನಡೆದಿದ್ದು, 22 ವರ್ಷದ ಲೀಲಾವತಿ ನಾಪತ್ತೆಯಾದ ಗೃಹಿಣಿಯಾಗಿದ್ದಾರೆ. ಲೀಲಾವತಿ ಅವರನ್ನು ಊದನಹಳ್ಳಿ ಗ್ರಾಮದ ಆರ್ಕೆಸ್ಟ್ರಾ ಕಲಾವಿದ ಮುನಿಕೃಷ್ಣ ಜೊತೆ ಮದುವೆ ಮಾಡಿಕೊಡಲಾಗಿತ್ತು. ಫೆಬ್ರವರಿ 23ರ ರಾತ್ರಿ ಮುನಿಕೃಷ್ಣ ತನ್ನ ತಂಗಿ ಮಗನ ಬರ್ತ್‍ಡೇ ಪಾರ್ಟಿಗೆ ಹೋಗಿದ್ದರು. ಇದೇ ವಿಚಾರಕ್ಕೆ ಲೀಲಾವತಿ ಹಾಗೂ ಮುನಿಕೃಷ್ಣನ ಇಬ್ಬರು ಜಗಳವಾಡಿದ್ದರು. ಈ ವೇಳೆ ಮುನಿಕೃಷ್ಣ ಹೆಂಡತಿಗೆ ಹೊಡೆದಿದ್ದರು. ಮರುದಿನ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಮುನಿಕೃಷ್ಣ ತನ್ನ ಫೇಸ್‍ಬುಕ್ ಅಕೌಂಟ್‍ನಲ್ಲಿ ಹೆಂಡತಿಯ ಫೋಟೋಗೆ RIP ಅಂತ ಬರೆದು ಶ್ರದ್ಧಾಂಜಲಿ ಸಲ್ಲಿಸಿ ಪೋಸ್ಟ್ ಹಾಕಲಾಗಿತ್ತು. ಇದನ್ನೂ ಓದಿ: ಪ್ರವಾಸಿಗರಿಗೆ ಸಿಹಿ ಸುದ್ದಿ- ಡಾರ್ಜಿಲಿಂಗ್‍ನ ಟಾಯ್ ರೈಲಿನ ದರ ಇಳಿಕೆ
Advertisement
Advertisement
ಈ ಪೋಸ್ಟ್ ನೋಡಿ ಗಾಬರಿಗೊಂಡ ಲೀಲಾವತಿ ತಂದೆ ಉದನಹಳ್ಳಿಗೆ ಬಂದು ಮಗಳನ್ನು ಹುಡುಕಾಡಿದ್ದಾರೆ. ಆದರೆ ಮಗಳು ಪತ್ತೆಯಾಗದ ಕಾರಣ ತನ್ನ ಮಗಳನ್ನು ಹೊಡೆದು ಸಾಯಿಸಿದ್ದಾನೆಂದು ನೆನೆದು ಕಣ್ಣೀರು ಹಾಕಿದ್ದಾರೆ. ಆದರೆ ಮುನಿಕೃಷ್ಣನ ತಮ್ಮ ಮುನಿರಾಜು ಬೇರೆಯದೇ ಕಥೆ ಹೇಳುತ್ತಿದ್ದಾರೆ. ಬರ್ತ್‍ಡೇ ಪಾರ್ಟಿ ವಿಚಾರಕ್ಕೆ ಅಣ್ಣ, ಅತ್ತಿಗೆ ನಡುವೆ ಜಗಳವಾಗಿ ಮರುದಿನ ಬೆಳಗ್ಗೆ ಅತ್ತಿಗೆಗೆ ಅಣ್ಣ ಹೊಡೆದಿದ್ದು ನಿಜ. ಆ ನಂತರ ಅತ್ತಿಗೆ ಬ್ಯಾಗ್ ತೆಗೆದುಕೊಂಡು ಮನೆ ಬಿಟ್ಟು ಹೋಗಿದ್ದಾರೆ. ಅಣ್ಣನ ಮೊಬೈಲ್ ಆಕೆಯ ಬಳಿ ಇದ್ದು, ಅತ್ತಿಗೆಯೇ ಅಣ್ಣನ ಫೇಸ್‍ಬುಕ್ ಅಕೌಂಟ್‍ನಲ್ಲಿ ತನ್ನ ಫೋಟೋ ಹಾಕಿ RIP ಎಂದು ಹಾಕಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ ಎಂದು ವಾದ ಮಾಡಿದ್ದಾರೆ.
Advertisement
ಸದ್ಯ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಲೀಲಾವತಿ ನಾಪತ್ತೆಗೆ ಸಂಬಂಧಿಸಿದಂತೆ ದೂರು ನೀಡಲಾಗಿದ್ದು, ಆಕೆಯ ಗಂಡ ಮುನಿಕೃಷ್ಣನನ್ನು ಠಾಣೆಗೆ ಕರೆದು ವಿಚಾರಣೆ ಮಾಡಲಾಗಿದೆ. ಜೊತೆಗೆ ಮೊಬೈಲ್ ಟವರ್ ಲೋಕೇಷನ್ ಪತ್ತೆ ಮಾಡಿದ್ದಾಗ ಆ ಮೊಬೈಲ್ ತಿರುಪತಿಯಲ್ಲಿರುವ ಮಾಹಿತಿ ಬರುತ್ತಿದೆ. ಆಸರೆ ಆಕೆ ಬದುಕಿದ್ದಾಳಾ ಇಲ್ಲವಾ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಬಾಂಬ್ ಆರ್ಭಟ – 30 ಗಂಟೆಗಳ ಕಾಲ ಮೆಟ್ರೋ ಸುರಂಗದಲ್ಲೇ ಕುಳಿತ ಭಾರತೀಯ ವಿದ್ಯಾರ್ಥಿಗಳು