ಹೈದರಾಬಾದ್: ಪತ್ನಿ ಮೃತಪಟ್ಟ ದುಃಖದಲ್ಲಿ ಮಗಳನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಆಂಧ್ರಪ್ರದೇಶದ ಮಂದಪೇಟಾದಲ್ಲಿ ನಡೆದಿದೆ.
ಚಂದನ ಕುಮಾರ್(ಚಂದು) ಆತ್ಮಹತ್ಯೆ ಮಾಡಿಕೊಂಡ ಪತಿ. ಚಂದು 2015ರಲ್ಲಿ ಕಾಂಚಾರ್ಲದ ಶ್ರೀ ನವ್ಯಾ ಎಂಬವರನ್ನು ಮದುವೆಯಾಗಿದ್ದನು. ಈ ದಂಪತಿಗೆ ಶ್ರೀ ಯೋಶಿತಾ ಎಂಬ ಮೂರು ವರ್ಷದ ಮಗಳು ಕೂಡ ಇದ್ದಳು. ಮೂವರು ಸಂತೋಷದಿಂದ ಜೀವನ ನಡೆಸುತ್ತಿದ್ದರು.
ಡೆಂಗ್ಯೂಯಿಂದ ಬಳಲುತ್ತಿದ್ದ ನವ್ಯಾ ಅಕ್ಟೋಬರ್ 5ರಂದು ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಳು. ಪತ್ನಿಯ ಆಕಸ್ಮಿಕ ಸಾವಿನಿಂದ ಚಂದು ಖಿನ್ನತೆಗೊಳಾಗಿದ್ದನು. ಅಲ್ಲದೆ ನವ್ಯಾಳ ಇಚ್ಛೆಯಂತೆ ಆಕೆಯ ಕಣ್ಣಗಳನ್ನು ದಾನ ಮಾಡಿದ್ದನು.
ಪತ್ನಿಯ ಸಾವಿನಿಂದ ಚಂದು ಮಾನಸಿಕ ಒತ್ತಡದಲ್ಲಿದ್ದನು. ನನ್ನ ಪತ್ನಿಯಿಲ್ಲದೆ ನನಗೆ ಜೀವನ ಇಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದನು. ಬಳಿಕ ನಾವು ನನ್ನ ಪತ್ನಿ ಬಳಿ ಹೋಗುತ್ತಿದ್ದೆವೆ ಎಂದು ಡೆತ್‍ನೋಟ್ ಕೂಡ ಬರೆದಿದ್ದನು.
ಚಂದು ಮೊದಲು ತನ್ನ ಮೂರು ವರ್ಷದ ಮಗಳನ್ನು ಕೊಂದು ಬಳಿಕ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಟುಂಬದಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂಬ ವಿಷಯ ತಿಳಿದು ಸಂಬಂಧಿಕರು ಆಘಾತಕ್ಕೊಳಗಾಗಿದ್ದಾರೆ.