ಹೈದರಾಬಾದ್: ಗೃಹಿಣಿಯೊಬ್ಬಳು ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾದ ಘಟನೆ ಶುಕ್ರವಾರ ಆಂಧ್ರ ಪ್ರದೇಶದ ಅಜಾದ್‍ನಗರದಲ್ಲಿ ನಡೆದಿದೆ.
ನೌಶಿದಾ ಬೇಗಂ ಶವವಾಗಿ ಪತ್ತೆಯಾದ ಗೃಹಿಣಿ. ನೌಶಿದಾ 2013ರಲ್ಲಿ ಪೇದೆ ಅಬ್ದುಲ್ ರಶೀದ್‍ನನ್ನು ಮದುವೆ ಆಗಿದ್ದಳು. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಅಬ್ದುಲ್ ಈಗ ತೆಲಂಗಾಣ ರಾಜ್ಯ ವಿಧಾನಸಭೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ರಶೀದ್ ನನ್ನು 2010ರಲ್ಲಿ ಎಸ್‍ಪಿಎಫ್ ಪೇದೆಯಾಗಿ ನೇಮಕ ಮಾಡಲಾಗಿತ್ತು.
Advertisement
Advertisement
ಮನೆ ಮಾಲೀಕ ಸಲೀಂ ನೌಶಿದಾ ಬೇಗಂ ಮೃತದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ನೌಶಿದಾ ರಕ್ತದ ಮಡುವಿನಲ್ಲಿ ಮೃತಪಟ್ಟಿದ್ದಳು. ನೌಶಿರಾ ಸಾವಿಗೆ ಆಕೆಯ ಪತಿ ಅಬ್ದುಲ್ ರಶೀದ್‍ಯೇ ಕಾರಣ ಎಂದು ಶಂಕಿಸಲಾಗಿದೆ.
Advertisement
ಪ್ರಾಥಮಿಕ ತನಿಖೆ ಪ್ರಕಾರ, ರಶೀದ್ ತನ್ನ ಪತ್ನಿ ನೌಶಿದಾಳನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಏಕೆಂದರೆ ರಶೀದ್ ತನ್ನ ಪತ್ನಿ ನೌಶಿದಾ ಶೀಲ ಶಂಕಿಸಿ ಪ್ರತಿನಿತ್ಯ ಜಗಳವಾಡುತ್ತಿದ್ದನು ಎಂದು ತಿಳಿದು ಬಂದಿದೆ.
Advertisement
ಪೊಲೀಸರು ನೌಶಿರಾ ಮೃತದೇಹವನ್ನು ಗಾಂಧಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲದೆ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.