ಗಾಂಧೀನಗರ: ಪತಿಯನ್ನು ಥಳಿಸಿ ಬಳಿಕ ಮಕ್ಕಳೊಂದಿಗೆ ಆತನನ್ನೂ ಮನೆಯಿಂದ ಹೊರಗೆ ಹಾಕಿ ಮಹಿಳೆಯ ಮೇಲೆ ಆಕೆಯ ಮನೆಯೊಳಗಡೆಯೇ ಗ್ಯಾಂಗ್ ರೇಪ್ ಎಸಗಿದ ಘಟನೆಯೊಂದು ಗುಜರಾತ್ ನಲ್ಲಿ ನಡೆದಿದೆ.
ಗುಜರಾತ್ ನ ಸಬರಕಾಂತ್ ಜಿಲ್ಲೆಯ ಹಿಮ್ಮತ್ ನಗರ ತಾಲೂಕಿನ ಗಥೋಡಾ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಈ ಘಟನೆ ನಡೆದಿದೆ.
Advertisement
32 ವರ್ಷದ ಮಹಿಳೆಯ ಮೇಲೆ ಇಬ್ಬರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಆರೋಪಿಗಳು ಕಾರ್ಮಿಕರಾಗಿದ್ದು, ಅವರ ಹೆಸರು ತಿಳಿದಿಲ್ಲವೆಂದು ಮಹಿಳೆ ಹೇಳಿದ್ದಾರೆ. ಈ ಘಟನೆಯಲ್ಲಿ ಐವರ ಪಾತ್ರವಿದೆ ಎಂದು ಹೇಳಲಾಗುತ್ತಿದೆ.
Advertisement
Advertisement
ಮಹಿಳೆಯ ಮನೆಯೊಳಗಡೆ ಏಕಾಏಕಿ ನುಗ್ಗಿದ ದುಷ್ಕರ್ಮಿಗಳಿಬ್ಬರು ಪತಿಗೆ ಚೆನ್ನಾಗಿ ಥಳಿಸಿ, ಮಕ್ಕಳೊಂದಿಗೆ ಆತನನ್ನೂ ಮನೆಯಿಂದ ಹೊರಗೆ ಹಾಕಿದ್ದಾರೆ. ಆ ಬಳಿಕ 5 ಮಕ್ಕಳ ತಾಯಿಯ ಮೇಲೆ ಇಬ್ಬರು ಅತ್ಯಾಚಾರವೆಸಗಿದ್ದಾರೆ. ಉಳಿದ ಮೂವರು ಮನೆಯ ಹೊರಗಡೆ ಕಾಯುತ್ತಾ ನಿಂತಿದ್ದರು ಎಂದು ಹಿಮ್ಮತ್ ನಗರದ ಹಿರಿಯ ಪೊಲೀಸ್ ಅಧಿಕಾರಿ ಎಚ್ ಡಿ ಧಂಧಾಲಿಯಾ ತಿಳಿಸಿದ್ದಾರೆ.
Advertisement
ಕಾರಿನಲ್ಲಿ ಬಂದಿರುವ ಆರೋಪಿಗಳು ಮೊದಲು ಮನೆಯ ಬಾಗಿಲು ತಟ್ಟಿದ್ದಾರೆ. ಈ ವೇಳೆ ನಾನು ಬಾಗಿಲು ತೆರೆದೆ. ಆಗ ಅವರು ನಮ್ಮ ಕಾರು ತುಂಬಾ ಬೆಚ್ಚಗಾಗಿದೆ, ಹೀಗಾಗಿ ಸ್ವಲ್ಪ ನೀರು ಕೊಡಿ ಎಂದು ಹೇಳಿದ್ದಾರೆ. ನಾನು ನೀರು ತರಲು ಒಳಗಡೆ ಹೋಗುತ್ತಿದ್ದಂತೆಯೇ ಅವರು ಏಕಾಏಕಿ ಮನೆಯೊಳಗಡೆ ನುಗ್ಗಿ ಈ ಕೃತ್ಯ ಎಸಗಿದ್ದಾರೆ ಎಂದು ಸಂತ್ರಸ್ತೆ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾರೆ.
ಘಟನೆ ಸಂಬಂಧ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅಲ್ಲದೆ ಸಂತ್ರಸ್ತೆ ನೀಡಿದ ಮಾಹಿತಿಯಂತೆ ಕಾರಿನ ಗುರುತು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಅಲ್ಲದೆ ಆರೋಪಿಗಳ ಪತ್ತೆಗೆ ತಂಡಗಳನ್ನು ರಚಿಸಿ ತನಿಖೆ ಆರಂಭಿಸಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.