ದಾವಣಗೆರೆ: ಮದ್ಯಪಾನ ಮಾಡಬೇಡಿ ಎಂದು ಬುದ್ದಿ ಹೇಳಿದ ಪತ್ನಿಯನ್ನು ಪತಿಯೇ ಕೊಂದಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮದಲ್ಲಿ ನಡೆದಿದೆ.
ಶಿಲ್ಪಾ(40) ಪತಿಯಿಂದ ಕೊಲೆಯಾದ ದುರ್ದೈವಿ ಪತ್ನಿ. ಗಿರೀಶ್ ಪತ್ನಿಯನ್ನೇ ಕೊಲೆ ಮಾಡಿದ ಆರೋಪಿ ಪತಿ. ಎರಡು ವರ್ಷಗಳಿಂದ ಸೊರಟೂರು ಗ್ರಾಮದಲ್ಲಿ ಗಿರೀಶ್ ಹಾಗೂ ಶಿಲ್ಪಾ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪ್ರತಿನಿತ್ಯ ಕುಡಿದು ಬರುತ್ತಿದ್ದ ಗಿರೀಶ್‍ಗೆ ಶಿಲ್ಪಾ ಬುದ್ಧಿ ಮಾತು ಹೇಳುತ್ತಿದ್ದರು. ಆದರೆ ಒಮ್ಮೆ ಕುಡಿಯಲು ಹಣ ಕೊಡುತ್ತಿಲ್ಲ, ಬುದ್ದಿಮಾತು ಹೇಳುತ್ತೀಯಾ ಎಂದು ಗಿರೀಶ್ ಪತ್ನಿಯನ್ನು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ:ಗಣೇಶೋತ್ಸವದ ಬಗ್ಗೆ ಹೆಚ್ಚು ಪ್ರಶ್ನೆ ಕೇಳಿದ್ದಕ್ಕೆ ಸಿಡಿಮಿಡಿಗೊಂಡ ಕಟೀಲ್
ಇದೀಗ ಹೊನ್ನಾಳಿ ಸಿಪಿಐ ದೇವರಾಜ್ ತಂಡ ಶಿಲ್ಪಾಳ ಕೊಲೆಯಾದ 8 ಗಂಟೆಯಲ್ಲಿಯೇ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಈ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ:ಕೇರಳದ 32 ಮಂದಿಗೆ ಸೋಂಕು, ಕೋಲಾರದ ನರ್ಸಿಂಗ್ ಕಾಲೇಜು ವಿರುದ್ಧ ಕಠಿಣ ಕ್ರಮ: ಸುಧಾಕರ್