ಹೈದರಾಬಾದ್: ಯೂಟ್ಯೂಬ್ ವೀಡಿಯೋ ನೋಡ್ಕೊಂಡು ಪತ್ನಿಗೆ ಡೆಲಿವರಿ ಮಾಡಿಸಿದ್ದಾನೆ. ಮಗು ಸಾವನ್ನಪಿದ್ದು, ಹೆಂಡತಿ ತೀವ್ರ ರಕ್ತಸ್ರಾವದಿಂದ ಐಸಿಯುಗೆ ಶಿಫ್ಟ್ ಆಗಿದ್ದಾಳೆ. ಪತಿ ಪೊಲೀಸ್ ಅತಿಥಿ ಆಗಿರುವ ವಿಚಿತ್ರ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.
ಲೋಕನಾಥನ್ ಬಂಧಿತ ಆರೋಪಿ ಪತಿಯಾಗಿದ್ದಾನೆ. ತಮಿಳುನಾಡಿನ ನಿವಾಸಿಯಾಗಿರುವ ಈತನನ್ನು ರಾಣಿಪೇಟೆಯ ಪೊಲೀಸರು ಬಂಧಿಸಿದ್ದಾರೆ. ಯೂಟ್ಯೂಬ್ ನೋಡ್ಕೊಂಡು ಪತ್ನಿಗೆ ಡೆಲಿವರಿ ಮಾಡಿಸಿ ಮಗು ಸಾವಿಗೆ ಕಾರಣನಾಗಿದ್ದಾನೆ.
Advertisement
Advertisement
2020ರಲ್ಲಿ ಲೋಕನಾಥನ್ ಮತ್ತು ಗೋಮತಿ ಮದುವೆಯಾಗಿದ್ದರು. ಡಿಸೆಂಬರ್ 13ರಂದು ಗೋಮತಿಗೆ ಹೆರಿಗೆ ಆಗಬೇಕಿತ್ತು. ಆದರೆ ಡಿಸೆಂಬರ್ 18ರಂದು ಆಕೆಗೆ ಹೆರಿಗೆ ನೋವಿನ ವೇದನೆ ಕಾಣಿಸಿಕೊಂಡಿತ್ತು. ಆಗ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಇಚ್ಛಿಸದ ಲೋಕನಾಥನ್ ಯೂಟ್ಯೂಬ್ ವೀಡಿಯೋಗಳನ್ನು ನೋಡಿಕೊಂಡು ಅಲ್ಲಿ ತಿಳಿಸಿದಂತೆ ತಾನೇ ಮನೆಯಲ್ಲಿ ಹೆರಿಗೆ ಮಾಡಿಸಲು ನಿರ್ಧರಿಸಿದ್ದಾನೆ. ಲೋಕನಾಥನ್ ಸಹೋದರಿ ಗೀತಾ ಕೂಡಾ ಇವರಿಗೆ ಸಹಾಯ ಮಾಡಲು ಜೊತೆಗಿದ್ದಳು. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದ ಮಗಳು – ತಾಳಿ ಕಿತ್ತು, ಜುಟ್ಟು ಹಿಡಿದು ಧರ, ಧರನೇ ಎಳೆದಾಡಿದ ತಂದೆ
Advertisement
Advertisement
ಮಗು ಜನಿಸುವಾಗಲೇ ಮೃತಪಟ್ಟಿತ್ತು. ಗೋಮತಿಗೆ ವಿಪರೀತ ರಕ್ತಸ್ರಾವ ಆಗಲು ಶುರುವಾಯಿತು. ನಂತರ ಆಕೆಯನ್ನು ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಲೋಕನಾಥನ್ ಕರೆದುಕೊಂಡು ಹೋದರು. ಆದರೆ ಅಲ್ಲಿನ ವೈದ್ಯರು ಆಕೆಯನ್ನು ದೊಡ್ಡ ಆಸ್ಪತ್ರೆಗೆ ಶಿಫ್ಟ್ ಮಾಡಲು ತಿಳಿಸಿದರು. ಸದ್ಯ ಗೋಮತಿ ವೆಲ್ಲೂರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮಗುವನ್ನು ಕಳೆದುಕೊಂಡ, ಪತ್ನಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇತ್ತ ಲೋಕನಾಥನ್ ಪೊಲೀಸರ ಅತಿಥಿಯಾಗಿದ್ದಾನೆ. ಇದನ್ನೂ ಓದಿ: ಪತ್ನಿ ನೆರವಿನಿಂದ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ- ಸಂತ್ರಸ್ತೆ ವಿದೇಶಕ್ಕೆ ಹೋದ್ರೂ ಬಿಟ್ಟಿಲ್ಲ ಆತನ ಕಾಮದಾಟ
அரக்கோணம் மாவட்டம் பனப்பாக்கத்தில் இளம்பெண்ணுக்கு அவரது கணவர் யூ-ட்யூப் பார்த்து பிரசவம் பார்த்ததாகவும், அதில் குழந்தை இறந்ததுடன், தாய் உயிருக்கு ஆபத்தான நிலையில் மருத்துவமனையில் சேர்க்கப்பட்டிருப்பதாகவும் வெளியான செய்தியறிந்து வேதனை அடைந்தேன்.(1/5)
— Dr ANBUMANI RAMADOSS (@draramadoss) December 20, 2021
ಪಿಎಂಕೆ ನಾಯಕ ಡಾ ಅನ್ಬುಮಣಿ ರಾಮದಾಸ್ ಈ ವಿಚಾರವಾಗಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಹೆರಿಗೆ ಎನ್ನುವುದು ಬಹಳ ಕಷ್ಟವಾದ ವಿಚಾರ. ಒಂದು ಸಣ್ಣ ತಪ್ಪು ಕೂಡಾ ತಾಯಿ ಮತ್ತು ಮಗುವಿನ ಜೀವಕ್ಕೇ ಕುತ್ತುತರ ಬಹುದಾಗಿದೆ. ಜ್ಯೂಸ್, ಮ್ಯಾಗಿ ಮಾಡಿ ಕೊಟ್ಟಂತೆ ಅಲ್ಲ, ಯೂಟ್ಯೂಬ್ ವೀಡಿಯೋ ನೋಡಿಕೊಂಡು ಮಾಡಲು ಎಂದು ಟ್ವೀಟ್ ಮಾಡಿದ್ದಾರೆ.