ಹುಬ್ಬಳ್ಳಿ: ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅಂತಾರೆ. ಆದರೆ ಹುಬ್ಬಳ್ಳಿಯಲ್ಲಿ ಪತಿಯೊಬ್ಬ ಪತ್ನಿಯ ಹತ್ಯೆಗೆ ಯತ್ನಿಸಿದ್ದು, ಈಗ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ಬ್ಯಾಡಗಿ ಪತ್ನಿಯನ್ನೇ ಕೊಲೆ ಮಾಡಲು ಮುಂದಾದ ಪತಿ. ರಾಘವೇಂದ್ರ ಆಕ್ಸಿಡೆಂಟ್ ರೀತಿಯಲ್ಲಿ ನನ್ನ ಹತ್ಯೆಗೆ ಯತ್ನಿಸಿದ್ದಾನೆ ಎಂದು ಪತ್ನಿ ಗೀತಾ ಆರೋಪಿಸಿದ್ದಾರೆ.
Advertisement
ಹುಬ್ಬಳ್ಳಿ ಹೊಸೂರು ಬಳಿ ಪತ್ನಿ ಗೀತಾ ಹಾಗೂ ಅವಳ ಸಹೋದರಿ ಬೈಕ್ ಮೇಲೆ ಹೋಗುವಾಗ ಪತಿ ರಾಘವೇಂದ್ರ ಬ್ಯಾಡಗಿ ಆಟೋದಿಂದ ಡಿಕ್ಕಿ ಹೊಡಿಸಿ ಆಕ್ಸಿಡೆಂಟ್ ರೀತಿಯಲ್ಲಿ ಹತ್ಯೆ ಮಾಡಲು ಯತ್ನಿಸಿದ್ದಾನೆ. ಗಾಯಗೊಂಡ ಗೀತಾ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಲೆಗೆ ಹಾಗೂ ಕೈಗೆ ಗಂಭೀರ ಗಾಯವಾಗಿದೆ.
Advertisement
ಸದ್ಯ ಗೀತಾ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಗಂಡನ ವಿರುದ್ಧ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಒಂದೂವರೆ ವರ್ಷಗಳ ಹಿಂದೆ ಮದುವೆಯಾದ ಗೀತಾ ಹಾಗೂ ರಾಘವೇಂದ್ರ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ರಾಘವೇಂದ್ರ ಪತ್ನಿ ಗೀತಾ ಮೇಲೆ ಸಂಶಯ ವ್ಯಕ್ತಪಡಿಸಿದ ಆ ಹಿನ್ನಲೆಯಲ್ಲಿ ಕೊಲೆಗೆ ಯತ್ನಿಸಿದ್ದಾನೆ ಅಂತಾ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.