ಹಾಸನ: ಪತ್ನಿಯ ಪ್ರಿಯಕರ ಹಾಗೂ ಇತರರು ನೀಡಿದ ಕಿರುಕುಳದಿಂದ ಮನನೊಂದ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹಾಸನ ಜಿಲ್ಲೆ ಶಾಂತಿಗ್ರಾಮದಲ್ಲಿ ನಡೆದಿದೆ.
ಹರೀಶ್ ವಿಷ ಸೇವಿಸಿ ಆತ್ಮಹತ್ಯೆಕ್ಕೆ ಯತ್ನಿಸಿದ ವ್ಯಕ್ತಿ. ಕಳೆನಾಶಕ ಸೇವಿಸಿರುವ ಹರೀಶ್ ಸ್ಥಿತಿ ಚಿಂತಾಜನಕವಾಗಿದ್ದು, ಹಾಸನ ಜಿಲ್ಲಾಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅರ್ಪಿತಾಗೆ ಇಬ್ಬರು ಮುದ್ದಾದ ಮಕ್ಕಳಿದ್ದರೂ, ಗಂಡನನ್ನು ಬಿಟ್ಟು ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎನ್ನಲಾಗಿದೆ. ಲವರ್ ಹಾಗೂ ಕೆಲ ವಕೀಲರ ಮೂಲಕ ವಿಚ್ಛೇದನ ನೀಡು ಇಲ್ಲ ಅಂದ್ರೆ ಸುಳ್ಳು ಕೇಸು ದಾಖಲು ಮಾಡಿಸುತ್ತೇವೆ ಎಂದೆಲ್ಲಾ ಟಾರ್ಚರ್ ನೀಡಿದ್ದೇ ಹರೀಶ್ ವಿಷ ಕುಡಿಯಲು ಕಾರಣ ಎಂದು ಸಂಬಂಧಿಕರು ದೂರಿದ್ದಾರೆ.
Advertisement
ಹರೀಶ್ ವಿಷ ಕುಡಿದು ಸಾಯಲಾಗದೆ, ಬದುಕಲಾಗದೇ ನರಳಾಡುತ್ತಿದ್ದಾರೆ. ಹರೀಶ್ ಮತ್ತು ಅರ್ಪಿತಾಗೂ 5 ವರ್ಷಗಳ ಹಿಂದೆ ಮದುವೆಯಾಗಿತ್ತು. ಇವರಿಗೆ ಮುದ್ದಾದ ಇಬ್ಬರು ಮಕ್ಕಳಿದ್ದರೂ, ಈಗ ವರ್ಷದ ಹಿಂದೆ ತಮ್ಮ ಮನೆಗೆ ಬಂದ ಚಾಲಕ ಮಲ್ಲಿಕಾರ್ಜುನ ಎಂಬಾತನ ಬಲೆಗೆ ಅರ್ಪಿತಾ ಬಿದ್ದಳು. ಆರಂಭದ ಪರಿಚಯ ಕ್ರಮೇಣ ಅಕ್ರಮ ಸಂಬಂಧಕ್ಕೆ ತಿರುಗಿದೆ.
Advertisement
ಕೆಲ ತಿಂಗಳ ಹಿಂದೆ ಅರ್ಪಿತಾ ತನ್ನ ಗಂಡನನ್ನು ತೊರೆದು ಹೋಗಿದಳು. ನಂತರ ಪ್ರಿಯಕರ ಮಲ್ಲಿಕಾರ್ಜುನ್ ಹಾಗೂ ಕೆಲವು ಲಾಯರ್ ಗಳ ಮೂಲಕ ಗಂಡನಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಮಲ್ಲಿಕಾರ್ಜುನ್, ಅರ್ಪಿತಾಳೊಂದಿಗೆ ನಡೆಸಿರೋ ಎಲ್ಲಾ ಸಂಭಾಷಣೆಗಳನ್ನು ಹರೀಶ್‍ನಿಗೆ ಕಳಿಸಿದ್ದಾನೆ. ಭಾನುವಾರ ಪತ್ನಿಗೆ ಡೈವೋರ್ಸ್ ಕೊಡು, ಇಲ್ಲಾಂದ್ರೆ ಸರಿ ಇರೋದಿಲ್ಲ ಅಂತೆಲ್ಲಾ ಲಾಯರ್ ಗಳ ಮೂಲಕ ಧಮ್ಕಿ ಹಾಕಿಸಿದ್ದಾನೆ. ಇದರಿಂದ ಮನನೊಂದ ಹರೀಶ್, ಸೋಮವಾರ ಬೆಳಗ್ಗೆ ವಿಷ ಕುಡಿದು ಸಾಯಲು ಯತ್ನಿಸಿದ್ದಾನೆ.
Advertisement
ಮಲ್ಲಿಕಾರ್ಜುನ್ ಮತ್ತು ಅರ್ಪಿತಾ ನಡುವೆ ಸಂಬಂಧ ಇತ್ತು ಅನ್ನೋದಕ್ಕೆ ಇಬ್ಬರೂ ಚಾಟ್ ಮಾಡಿರುವ ಮೊಬೈಲ್ ಮೆಸೇಜ್ ಹಾಗೂ ಆಡಿಯೋ ಸಂಭಾಷಣೆ ಸಾಕ್ಷಿಯಾಗಿವೆ. ಈ ಎಲ್ಲಾ ಸಂಭಾಷಣೆಗಳನ್ನು ಹರೀಶ್ ಗೆ ಕಳಿಸಿರುವ ಮಲ್ಲಿಕಾರ್ಜುನ್, ನಿನ್ನ ಪತ್ನಿ ನಾನು ಮದುವೆಯಾಗುತ್ತೇವೆ. ಇದಕ್ಕೆ ನೀನೇನಾದ್ರೂ ಚಕಾರ ಎತ್ತಿದ್ರೆ, ನಿನ್ನ ಮೇಲೆ ಸುಳ್ಳು ಕೇಸು ಹಾಕಿಸಿ ಜೈಲಿಗೆ ಕಳಿಸುತ್ತೇವೆ ಎಂದೆಲ್ಲಾ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲ ನಿನ್ನ ಪತ್ನಿಗೆ ಜನಿಸಲಿರುವ ಮೂರನೇ ಮಗುವಿಗೆ ನಾನೇ ಅಪ್ಪ ಎಂದು ಮುಜುಗರ ತರುವ ಮಾತುಗಳನ್ನು ಆಡಿದ್ದೇ ಹರೀಶ್ ಸಾಯುವ ನಿರ್ಧಾರಕ್ಕೆ ಬರಲು ಮೂಲ ಕಾರಣ ಎನ್ನಲಾಗಿದೆ.