ಕೊಪ್ಪಳ: ಭಾಗ್ಯಾನಗರದಲ್ಲಿ ನಿತ್ಯ ಹೆಂಡತಿ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನ ಸ್ವತಃ ಅಕ್ಕನೆ ಕೈಕಾಲು ಕಟ್ಟಿಹಾಕಿ ಧರ್ಮದೇಟು ನೀಡಿದ್ದಾರೆ.
ಕಳಕಪ್ಪ ಡಾಣಾಪುರ ಎಂಬಾತ ಕೂದಲು ಉದ್ಯಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಬಂದ ಹಣವನ್ನೆಲ್ಲ ಕುಡಿದು, ಮನೆಗೆ ಬಂದು ಹೆಂಡತಿ ಮಕ್ಕಳಿಗೆ ನಿತ್ಯ ಕಿರುಕುಳ ನೀಡುತ್ತಿದ್ದ.
Advertisement
ಸೋಮವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದ ಕಳಕಪ್ಪ ಹೆಂಡತಿ ಮೇಲೆ ಹಲ್ಲೆ ಮಾಡಿದ್ದಾನೆ. ಹೆಂಡತಿಯನ್ನು ಮನೆಯಿಂದ ಹೊರಹಾಕಿ, ತನ್ನ ಮಗಳನ್ನು ತನ್ನ ತಂಗಿಯ ಮನೆಗೆ ತಂದು ಬಿಟ್ಟಿದ್ದಾನೆ. ಈತನ ವರ್ತನೆಯಿಂದ ಬೇಸತ್ತು, ಸ್ವತಃ ಅಕ್ಕನೇ ತನ್ನ ಮನೆಮುಂದೆ ಕೈ ಕಾಲುಗಳನ್ನ ಕಟ್ಟಿಹಾಕಿ ನಾಲ್ಕೈದು ಧರ್ಮದೇಟು ನೀಡಿ ಬುದ್ಧಿ ಹೇಳಿದರು. ನಿನ್ನ ಹೆಂಡತಿಯನ್ನು ಎಲ್ಲಿಗೆ ಕಳಿಸಿದ್ದಿಯಾ, ಅವಳು ಬರುವವರೆಗೆ ನಿನ್ನನ್ನೂ ಬಿಡುವುದಿಲ್ಲ ಎಂದು ತಮ್ಮನೆಂಬುದನ್ನು ಮರೆತು ಧರ್ಮದೇಟು ನೀಡಿದ್ದಾರೆ.
Advertisement
ಗಂಡನ ಕಿರುಕುಳಕ್ಕೆ ಬೇಸತ್ತು ಮನೆಬಿಟ್ಟು ಹೋಗಿದ್ದ ಹೆಂಡತಿಯನ್ನು ಸ್ಥಳೀಯರು ಹುಡುಕಾಡಿ ಮನೆಗೆ ಕರೆದುಕೊಂಡು ಬಂದಿದ್ದಾರೆ. ದುಡಿದ ಹಣವನ್ನ ಮನೆಗೆ ಕೊಡುವುದಿಲ್ಲ, ಬದಲಾಗಿ ನಿತ್ಯ ಕಿರುಕುಳ ನೀಡುತ್ತಾನೆ. ಈತನ ವರ್ತನೆಯಿಂದ ಬೇಸತ್ತು ಮನೆಯಿಂದ ಹೋಗಿದ್ದೆ ಎಂದು ಹೆಂಡತಿ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.
Advertisement
ಸ್ಥಳೀಯರು ಕೊಪ್ಪಳ ನಗರ ಪೊಲೀಸರಿಗೆ ನೀಡಿದ ಮಾಹಿತಿಯಿಂದ, ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಳಕಪ್ಪನ ನ್ನು ತಮ್ಮ ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋದರು.