ಭೋಪಾಲ್: ಸಾಮಾನ್ಯವಾಗಿ ಪತಿ ಮತ್ತು ಪತ್ನಿ ಜಗಳ ಮಾಡಿಕೊಂಡರೆ ಅಥವಾ ವಿಚ್ಛೇದನಕ್ಕೆ ಮುಂದಾಗ ದಂಪತಿ ಇಬ್ಬರು ಕೌನ್ಸಿಲಿಂಗ್ ಹೋಗುತ್ತಾರೆ. ಆದರೆ ಇಲ್ಲೊಬ್ಬ ಪತಿ ತನ್ನ ಪತ್ನಿ ಮದ್ಯಪಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕೆಂದು ಕೌನ್ಸಿಲಿಂಗ್ ಕರೆದುಕೊಂಡು ಹೋಗಿರುವ ವಿಲಕ್ಷಣ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಪತಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಈತನ ಕುಟುಂಬದಲ್ಲಿ ತಾಯಿ, ತಂದೆ, ಒಡಹುಟ್ಟಿದವರು, ಚಿಕ್ಕಮ್ಮ ಮತ್ತು ಸಂಬಂಧಿಕರು ಸೇರಿದಂತೆ ಎಲ್ಲರೂ ಔತಣ ಕೂಟ, ಪಾರ್ಟಿಗಳಲ್ಲಿ ಮದ್ಯಪಾನ ಮಾಡುತ್ತಾರೆ. ಪತ್ನಿ ಮದುವೆಯಾದ ಆರಂಭದ ದಿನದಿಂದಲೂ ಮದ್ಯದಿಂದ ದೂರವಿದ್ದಳು. ಪತಿಗೂ ಆಕೆಗೆ ಕುಡಿಯದಿದ್ದರಿಂದ ಬೇಸರವೇನು ಆಗಿರಲಿಲ್ಲ. ಆದರೆ ಕಾಲಕಳೆದಂತೆ ನಿಧಾನವಾಗಿ ಕುಡಿ ಎಂದು ಕುಟುಂಬದ ಸದಸ್ಯರು ಆಕೆಗೆ ಒತ್ತಾಯಿಸಿದ್ದಾರೆ. ಆಗ ಪತ್ನಿ ಕುಡಿಯಲು ನಿರಾಕರಿಸಿದ್ದಾಳೆ. ಇದರಿಂದ ಅವರಿಬ್ಬರ ಮದ್ಯೆ ಜಗಳ ಉಂಟಾಗಿದೆ ಎಂದು ಕೌನ್ಸೆಲರ್ ಶೈಲ್ ಅವಸ್ತಿ ಹೇಳಿದ್ದಾರೆ.
Advertisement
Advertisement
ಈ ದಂಪತಿ ಹೊಸದಾಗಿ ಮದುವೆಯಾದ ಜೋಡಿಯೇನು ಅಲ್ಲ. ಇವರಿಗೆ ಮೂವರು ಮಕ್ಕಳಿದ್ದು, ಮಕ್ಕಳಿಗೆ 9, 6 ಮತ್ತು 4 ವರ್ಷ ವಯಸ್ಸಾಗಿದೆ. ಮದುವೆಯಾದ ಕೆಲವು ತಿಂಗಳಲ್ಲೇ ಇಬ್ಬರ ನಡುವೆ ಮದ್ಯಪಾನ ಮಾಡುವುದರ ಬಗ್ಗೆ ಜಗಳ ಶುರುವಾಗಿತ್ತು. ಆಗ ಪತ್ನಿ ಮಕ್ಕಳ ಸಮೇತ ತವರು ಮನೆಗೆ ಹೋಗುತ್ತಿದ್ದಳು. ಮಹಿಳೆ ಮದ್ಯ ಕುಡಿಯುವುದಿರಲಿ, ಅದನ್ನು ಕೈಯಲ್ಲೂ ಸಹಾ ಮುಟ್ಟುತ್ತಿರಲಿಲ್ಲ. ಯಾಕೆಂದರೆ ಆಕೆಯ ಮನೆಯಲ್ಲಿ ಯಾರು ಕೂಡ ಮದ್ಯ ಸೇವನೆ ಮಾಡುತ್ತಿರಲಿಲ್ಲ. ಹೀಗಾಗಿ ಆಕೆಗೆ ಮದ್ಯಪಾನ ಮಾಡುವ ಅಭ್ಯಾಸವಿರಲಿಲ್ಲ.
Advertisement
Advertisement
ಇತ್ತ ಪತಿಯ ಮನೆಯಲ್ಲಿ ಮೊದಲಿನಿಂದಲೂ ಮದ್ಯಪಾನ ಮಾಡುವುದನ್ನು ರೂಢಿಸಿಕೊಂಡು ಬಂದಿದ್ದಾರೆ. ಇದನ್ನು ತಿಳಿದು ಪತ್ನಿಯೂ ಸಹ ಪತಿಗೆ ಕುಡಿಯಬೇಡಿ ಎಂದು ಹೇಳಿರಲಿಲ್ಲ. ಆದರೆ ಮನೆಯಲ್ಲಿ ಅತ್ತೆ-ಮಾವ, ಸಂಬಂಧಿಕರು ಮಾತ್ರ ಆಕೆಗೆ ಪ್ರತಿದಿನ ಮದ್ಯಪಾನ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಆದರೂ ಮಹಿಳೆ ಮದ್ಯಪಾನ ಮಾಡುತ್ತಿರಲಿಲ್ಲ. ಆಕೆಗೆ ಮದ್ಯಪಾನ ಮಾಡುವುದು ಇಷ್ಟವಿರಲಿಲ್ಲ. ಜೊತೆಗೆ ಆಕೆಯ ಮಕ್ಕಳು ಅಮ್ಮ ಮದ್ಯಪಾನ ಮಾಡುತ್ತಾಳೆ ಎಂದು ಭಾವಿಸುವುದು ಇಷ್ಟವಿರಲಿಲ್ಲ. ಹೀಗಾಗಿ ಆಕೆ ಕುಡಿಯುವುದನ್ನು ನಿರಾಕರಿಸುತ್ತಿದ್ದಳು.
ಕೊನೆಗೆ ಜಗಳ ವಿಕೋಪಕ್ಕೆ ಹೋದಾಗ ಪತಿ ಮದ್ಯಪಾನ ಅಭ್ಯಾಸ ಮಾಡಿಕೊಳ್ಳುವಂತೆ ಪತಿಯನ್ನು ಕೌನ್ಸಿಲಿಂಗ್‍ಗೆ ಕರೆದುಕೊಂಡು ಬಂದಿದ್ದನು. ಆಗ ನಾವು ಮಹಿಳೆ ಇಚ್ಛೆಗೆ ವಿರುದ್ಧವಾಗಿ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸುವ ಪ್ರಯತ್ನ ಮಾಡಬಾರದು ಎಂದು ಪತಿಗೆ ಮನವರಿಕೆ ಮಾಡಿಸುವ ಪ್ರಯತ್ನ ಮಾಡಿದ್ದೇವೆ ಎಂದು ಅವಸ್ತಿ ತಿಳಿಸಿದ್ದಾರೆ.