ಭೋಪಾಲ್: ಬ್ಯೂಟಿ ಪಾರ್ಲರ್‌ಗೆ (Beauty Parlour) ಹೋಗುವುದನ್ನು ಪತಿ (Husband) ತಡೆದಿದ್ದಕ್ಕೆ ಮಹಿಳೆಯೊಬ್ಬಳು (Woman) ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ರೀನಾ ಯಾದವ್ (34) ಮೃತ ಮಹಿಳೆ. ರೀನಾ ಬ್ಯೂಟಿ ಪಾರ್ಲರ್‌ಗೆ ಹೋಗಲು ಸಿದ್ಧಳಾಗುತ್ತಿದ್ದಳು. ಈ ವೇಳೆ ಆಕೆಯ ಪತಿ ಬಲರಾಮ್ ಪಾರ್ಲರ್‌ಗೆ ಹೋಗುವುದು ಬೇಡ ಎಂದು ತಡೆದಿದ್ದಾನೆ. ಇದರಿಂದ ಕೋಪಗೊಂಡ ರೀನಾ ತನ್ನ ರೂಮ್‍ಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನೆ ಬಳಿಕ ಆಕೆಯ ಪತಿ ಬಲರಾಮ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ. ಮದುವೆಯಾಗಿ 15 ವರ್ಷಗಳಾಗಿದ್ದು, ಬಲರಾಮ್ ಹಾಗೂ ರೀನಾ ನಡುವೆ ನಿರಂತರ ಜಗಳ ನಡೆಯುತ್ತಿತ್ತು ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷಗಳು ನಾನಾರೀತಿಯ ನಾಟಕಗಳನ್ನು ಮಾಡುತ್ತಿದೆ: ಮುನಿರತ್ನ
ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಎಲ್ಲಾ ರೀತಿಯಲ್ಲೂ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕಾರಿನಿಂದ ಕುಸಿದಿದ್ದಕ್ಕೆ ಸಿದ್ದರಾಮಯ್ಯರನ್ನು ಟೀಕಿಸುವುದು ಸರಿಯಲ್ಲ – ಬಿಎಸ್‍ವೈ