ವ್ಯಕ್ತಿಯೊಬ್ಬ ವಿಮಾನದಲ್ಲಿ 6 ಗಂಟೆ ನಿಂತು ಪ್ರಯಾಣಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಕಟ್ರ್ನಿ ಲೀ ಜಾನ್ಸನ್ ಎಂಬ ಟ್ವಿಟ್ಟರ್ ಖಾತೆ ಹೊಂದಿದವರು ಈ ಫೋಟೋವನ್ನು ಹಾಕಿ ಅದಕ್ಕೆ, “ತನ್ನ ಪತ್ನಿ ಮಲಗಬಹುದು ಎಂದು ಈ ವ್ಯಕ್ತಿ ವಿಮಾನದಲ್ಲಿ 6 ಗಂಟೆಗಳ ಕಾಲ ಎದ್ದು ನಿಂತಿದ್ದಾನೆ. ಇದು ಪ್ರೀತಿ ಎಂದರೆ” ಎಂದು ಟ್ವೀಟ್ ಮಾಡಿದ್ದಾರೆ.
Advertisement
ವೈರಲ್ ಆಗಿರುವ ಫೋಟೋದಲ್ಲಿ ಪತಿ, ಮಲಗಿರುವ ತನ್ನ ಪತ್ನಿಯನ್ನು ಪ್ರೀತಿಯಿಂದ ನೋಡುತ್ತಿದ್ದಾನೆ. ಪತ್ನಿ ವಿಮಾನದಲ್ಲಿರುವ ಮೂರು ಸೀಟಿನಲ್ಲಿ ಅಡ್ಜಸ್ಟ್ ಆಗಿ ಮಲಗಿರುವುದು ಫೋಟೋದಲ್ಲಿ ಕಂಡು ಬಂದಿದೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ಜನರು ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.
Advertisement
This guy stood up the whole 6 hours so his wife could sleep. Now THAT is love. pic.twitter.com/Vk9clS9cCj
— Courtney Lee Johnson (@courtneylj_) September 6, 2019
Advertisement
ಈ ಫೋಟೋ ನೋಡಿ ಕೆಲವರು ಜೋಡಿಯ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಪತಿ ತನ್ನ ಪತ್ನಿಗಾಗಿ ಸೀಟು ಬಿಟ್ಟು ಕೊಟ್ಟಿದ್ದು ಕೆಲವರಿಗೆ ಇಷ್ಟವಾಗಲಿಲ್ಲ. ಹೀಗಾಗಿ ಅವರು ಇದಕ್ಕೆ ವಿರೋಧವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
Advertisement
ಮತ್ತೆ ಕೆಲವರು ಈ ಫೋಟೋ ನೋಡಿ ಇದು ನಿಜವಾದ ಪ್ರೀತಿ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಮಹಿಳೆಯನ್ನು ಸ್ವಾರ್ಥಿ ಎಂದು ಹೇಳುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಿಳೆ ಪತಿಯ ಭುಜದ ಮೇಲೆ ತಲೆಯಿಟ್ಟು ಮಲಗಬಹುದಿತ್ತು ಎಂದು ಮತ್ತೆ ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.