-ಕಾರವಾರದಲ್ಲಿ ಹೃದಯ ವಿದ್ರಾವಕ ಘಟನೆ
ಕಾರವಾರ: ಒಂದು ವಾರದಿಂದ ಅನಾರೋಗ್ಯ ಪೀಡಿತ ಪತಿ ತನ್ನ ಪತ್ನಿಯ ಶವದ ಜೊತೆ ಕಾಲ ಕಳೆದ ಹೃದಯ ವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿನ ಕೆ.ಹೆಚ್ .ಬಿ ಕಾಲೋನಿಯಲ್ಲಿ ನಡೆದಿದೆ.
Advertisement
ಆನಂದ್ ಮಡಿವಾಳ (55) ಪತ್ನಿ ಶವದ ಜೊತೆ ಕಾಲ ಕಳೆದ ಪತಿಯಾಗಿದ್ದು ಗಿರಿಜಾ ಮಡಿವಾಳ (42) ಮೃತ ಪತ್ನಿ. ಆನಂದ್ ಹಲವು ವರ್ಷಗಳಿಂದ ಪ್ಯಾರಲಿಸೀಸ್ ಅನಾರೋಗ್ಯ ಸಮಸ್ಯೆಯಿಂದ ಇಡೀ ದೇಹದ ಸ್ವಾದೀನ ಕಳೆದುಕೊಂಡಿದ್ದು ಹೆಂಡತಿಯ ಆಶ್ರಯದಲ್ಲಿ ಜೀವಿಸುತ್ತಿದ್ದರು. ಆದರೆ ಕಳೆದ ಒಂದು ವಾರದ ಹಿಂದೆ ಗಿರಿಜಾ ಅವರು ಹೃದಯಘಾತದಿಂದ ಮೃತಪಟ್ಟಿದ್ದು, ಈ ವೇಳೆ ಯಾರ ಸಹಾಯ ಪಡೆಯಲು ಸಾಧ್ಯವಾಗದೆ ಪತ್ನಿಯ ಮೃತದೇಹದೊಂದಿಗೆ ಕಾಲ ಕಳೆದಿದ್ದಾರೆ.
Advertisement
Advertisement
ಘಟನೆ ಬೆಳಕಿಗೆ ಬಂದಿದ್ದು ಹೇಗೆ: ಅಂದಹಾಗೇ ದಂಪತಿಗೆ ಮಕ್ಕಳಿಲ್ಲವಾದ್ದರಿಂದ ಇಬ್ಬರೇ ವಾಸಿಸುತ್ತಿದ್ದರು. ಗಿರಿಜಾ ಅವರು ಸ್ಥಳೀಯ ಮನೆಗಳಲ್ಲಿ ಮನೆಗೆಲಸ ಮಾಡಿ ಪತಿಯನ್ನು ಸಲಹುತಿದ್ದರು. ಆದರೆ ಕಳೆದ ಒಂದು ವಾರದ ಹಿಂದೆ ಗಿರಿಜಾ ಅವರು ರಾತ್ರಿ ಮನೆಯಲ್ಲಿ ಗಂಡನ ಎದುರು ಕುಳಿತಿದ್ದ ವೇಳೆಯೇ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಈ ವೇಳೆ ಪಾಶ್ರ್ವವಾಯು ಪೀಡಿತ ಗಂಡ ಮಾತ್ರ ಎದ್ದೇಳಲು ಆಗದೇ ಮಾತನಾಡಲೂ ಆಗದೇ ಸತತ ಒಂದು ವಾರದಿಂದ ಕೊಳೆತ ಸ್ಥಿತಿಯಲ್ಲಿರುವ ತನ್ನ ಹೆಂಡತಿಯ ದೇಹದೊಂದಿಗೆ ಅನ್ನ ,ನೀರಿಲ್ಲದೇ ದಿನದೂಡಿದ್ದಾರೆ.
Advertisement
ಈ ವೇಳೆ ಪ್ರತಿ ದಿನ ಮನೆಗೆಲಸಕ್ಕೆ ಬರುತ್ತಿದ್ದ ಗಿರಿಜಾ ಅವರು ಒಂದು ವಾರದಿಂದ ಕೆಲಸಕ್ಕೆ ಬರದ ಹಿನ್ನಲೆಯಲ್ಲಿ ಮಾಲೀಕರು ಮನೆಯ ಬಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಕಾರವಾರ ನಗರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶವವನ್ನು ಸಂಸ್ಕಾರ ಮಾಡಿದ್ದಾರೆ. ಇನ್ನು ಅನಾರೋಗ್ಯದ ಜೊತೆ ಐದು ದಿನಗಳವರೆಗೆ ಉಪವಾಸವಿದ್ದ ಆನಂದ್ ಸಾವು ಬದುಕಿನ ನಡುವೆ ಸೆಣಸಾಡುತ್ತಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.