ಚಿಕ್ಕಬಳ್ಳಾಪುರ: ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪತಿಯೊರ್ವ ಬೆಳ್ಳಂಬೆಳಗ್ಗೆ ನಡು ರಸ್ತೆಯಲ್ಲಿ ತನ್ನ ಪತ್ನಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.
ನಗರದ ಆದರ್ಶ ಚಿತ್ರಮಂದಿರದ ಬಳಿ ಘಟನೆ ನಡೆದಿದ್ದು, ಅಂಬೇಡ್ಕರ್ ಕಾಲೋನಿ ನಿವಾಸಿ ನಾಗರತ್ನಮ್ಮಗೆ ಗಂಡ ಗುಡ್ಡಿ ಲಕ್ಷಣ (ರೌಡಿಶೀಟರ್) ಚಾಕುವಿನಿಂದ ಇರಿದಿದ್ದಾನೆ. ನಾಗರತ್ನಮ್ಮ ಅವರ ಕುತ್ತಿಗೆ ಹಾಗೂ ಹೊಟ್ಟೆ ಮೇಲೆ ನಾಲ್ಕೈದು ಬಾರಿ ಇರಿದು ಗಂಡ ಲಕ್ಷಣ ಕೊಲೆ ಮಾಡಲು ಯತ್ನಿಸಿದ್ದಾನೆ.
ನಾಗರತ್ನಮ್ಮ ಗುಡ್ಡಿ ಲಕ್ಷಣನ ಎರಡನೇ ಹೆಂಡತಿಯಾಗಿದ್ದು, ಪೆಟ್ಟಿಗೆ ಚಿಲ್ಲರೆ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಸದ್ಯ ಗಾಯಾಳು ನಾಗರತ್ನಮ್ಮ ಅವರಿಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಆಸ್ಪತ್ರೆಗೆ ರವಾನಿಸಲಾಗಿದೆ.
ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
26ರ ಯುವಕನನ್ನು ಕೊಲೆಗೈದು, ಪೀಸ್‍ಪೀಸ್ ಮಾಡಿ ಫ್ರಿಡ್ಜ್ ನಲ್ಲಿಟ್ಟು ಪರಾರಿಯಾದ! https://t.co/IyhpSTtRdY#Man #Murder #Fridge #Police pic.twitter.com/L4OroH91nT
— PublicTV (@publictvnews) October 15, 2017