ದಾವಣಗೆರೆ: ಕೋರ್ಟ್ (Court) ಒಳಗಡೆಯೇ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಚಾಕು ಇರಿದ ಪ್ರಕರಣ ದಾವಣಗೆರೆಯಲ್ಲಿ (Davanagere) ನಡೆದಿದೆ.
ಚಾಕು ಇರಿತಕ್ಕೊಳಗಾದ ಮಹಿಳೆಯನ್ನು ಪದ್ಮಾವತಿ (30) ಎಂದು ಗುರುತಿಸಲಾಗಿದೆ. ಚಾಕು ಇರಿದ ಆರೋಪಿಯನ್ನು ಪ್ರವೀಣ್ ಕುಮಾರ್ ಎಂದು ಗುರುತಿಸಲಾಗಿದೆ. ಇಬ್ಬರು ಡಿವೋರ್ಸ್ (Divorce) ಅರ್ಜಿ ವಿಚಾರಣೆ ಹಿನ್ನೆಲೆ ಕೋರ್ಟ್‍ಗೆ ಆಗಮಿಸಿದ್ದರು. ಈ ವೇಳೆ ಆರೋಪಿ ಏಕಾಏಕಿ ಮಹಿಳೆಗೆ ಚಾಕು ಇರಿದಿದ್ದಾನೆ. ಇದನ್ನೂ ಓದಿ: ಕಲಬುರಗಿ | ಬೆತ್ತಲೆ ಮಾಡಿ ಕಟ್ಟಿಗೆಯಿಂದ ಹೊಡೆದು ವ್ಯಕ್ತಿಯ ಬರ್ಬರ ಹತ್ಯೆ
ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಪ್ರವೀಣ್ ಕುಮಾರ್ ವಿರುದ್ಧ ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮಾತು ಬಾರದ ಮಹಿಳೆ ಬಾಯಿಗೆ ಬಟ್ಟೆ ತುರುಕಿ ವಿಕೃತಿ – ಆರೋಪಿ ಅರೆಸ್ಟ್