– ಹೆಂಡ್ತಿ ಮುಂದೆಯೇ ಇನ್ನೊಂದು ಹುಡುಗಿ ಜೊತೆ ಸಲುಗೆ
ಬೆಂಗಳೂರು: ನಿತ್ಯ ಅಶ್ಲೀಲ ವೀಡಿಯೋ ತೋರಿಸಿ ಕಿರುಕುಳ ನೀಡುತ್ತಿದ್ದ ಗಂಡನ ನಡೆಗೆ ಬೇಸತ್ತು ಮಹಿಳೆ (Woman) ಪೆಟ್ರೋಲ್ (Petrol) ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಹುಳಿಮಾವು (Hulimavu) ಅಕ್ಷಯನಗರದಲ್ಲಿ ನಡೆದಿದೆ.
ಅನುಷಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈಕೆಯ ಪತಿ ಶ್ರೀಹರಿ ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೋ ತೋರಿಸಿ ಹೀಗೆ ಸಹಕರಿಸು ಎಂದು ಟಾರ್ಚರ್ ಕೊಡುತ್ತಿದ್ದ. ಅಲ್ಲದೇ ಆಕೆಯ ಮುಂದೆಯೇ ಇನ್ನೊಂದು ಹುಡುಗಿಯ ಜೊತೆ ಸಲುಗೆ ಬೆಳೆಸಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಹೆಂಡತಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಎರಡು ತಿಂಗಳಿಂದ ಡೈವರ್ಸ್ ಕೊಡುವಂತೆ ಪೀಡಿಸುತ್ತಿದ್ದ. ಇದರಿಂದ ಬೇಸತ್ತು ಅನುಷಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕೊಲೆಗೂ ಮುನ್ನ ರೇಣುಕಾಸ್ವಾಮಿಯನ್ನು ದರೋಡೆ ಮಾಡಿತ್ತು ‘ಡಿ’ಗ್ಯಾಂಗ್!
ಶ್ರೀಹರಿ ಹಾಗೂ ಅನುಷಾಗೆ ಮದುವೆಯಾಗಿ 5 ವರ್ಷ ಆಗಿತ್ತು. ಒಂದು ಮಗು ಕೂಡ ಇತ್ತು. ಹಾಗಿದ್ದರೂ ಪತಿ ಶ್ರೀಹರಿ ಇತರೆ ಹುಡುಗಿಯರ ಜೊತೆ ಸಹವಾಸ ಮಾಡಿದ್ದ. ಮನೆಯ ವಾಶ್ ರೂಂನಿಂದ ಗಂಡನಿಗೆ ವೀಡಿಯೋ ಕಾಲ್ ಮಾಡಿ ಪೆಟ್ರೋಲ್ ಸುರಿದುಕೊಳ್ಳುತ್ತೇನೆ ಎಂದು ಹೆಂಡತಿ ಹೇಳಿದ್ದಳು. ಈ ವೇಳೆ ರಕ್ಷಣೆ ಮಾಡದೇ ನಿರ್ಲಕ್ಷ್ಯ ಮಾಡಿರುವುದಾಗಿ ಮೃತ ಅನುಷಾ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಬಲಮುರಿ ಹಾಗೂ ಎಡಮುರಿ ಗಣಪತಿಗೆ ಇರುವ ವ್ಯತ್ಯಾಸವೇನು?