ಹೈದರಾಬಾದ್: ಪತ್ನಿಯೊಬ್ಬಳು ಬೇರೊಬ್ಬ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದು, ಪತಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಘಟನೆ ನಗರದ ಚೈನತ್ಯಪುರಿಯಲ್ಲಿ ನಡೆದಿದೆ.
ಚೈನತ್ಯಪುರಿಯ ವಾಸವಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಸಂತೋಷ್ ರೆಡ್ಡಿ ಎಂಬಾತ ಸಮತಾ ಜೊತೆ ಮದುವೆಯಾಗಿದ್ದನು. ಆದರೆ ಉನ್ನತ ಶಿಕ್ಷಣಕ್ಕಾಗಿ ಸಂತೋಷ ಆಸ್ಟ್ರೇಲಿಯಾಕ್ಕೆ ಹೋಗಿದ್ದನು.
ಸ್ವಲ್ಪ ದಿನಗಳು ಕಳೆದ ನಂತರ ಪತ್ನಿ ಸಮತಾಳನ್ನು ಆಸ್ಟ್ರೇಲಿಯಾಗೆ ಬರುವಂತೆ ಹೇಳಿದ್ದಾನೆ. ಆದರೆ ಪತ್ನಿ ಬೇರೆ ಬೇರೆ ನೆಪ ಹೇಳಿ ಆಸ್ಟ್ರೇಲಿಯಾಗೆ ಹೋಗುವುದನ್ನು ನಿರಾಕರಿಸುತ್ತಾ ಬಂದಿದ್ದಳು. ಇದರಿಂದ ಅನುಮಾನಗೊಂಡ ಸಂತೋಷ ರೆಡ್ಡಿ ಪತ್ನಿಗೂ ತಿಳಿಸದೆ ಹೈದರಾಬಾದ್‍ಗೆ ಬಂದಿದ್ದಾನೆ.
ಆಗ ಪತ್ನಿ ಬೇರೆಯೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ತಿಳಿದಿದೆ. ತಕ್ಷಣ ಪೊಲೀಸರಿಗೆ ಫೋನ್ ಮಾಡಿ ಅವರ ಜೊತೆ ಮಧ್ಯರಾತ್ರಿ ಅವರಿಬ್ಬರಿದ್ದ ಫ್ಲಾಟ್‍ಗೆ ನುಗ್ಗಿದ್ದಾನೆ. ಆಗ ಪತ್ನಿ ಬೇರೆಯೊಬ್ಬ ವ್ಯಕ್ತಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. ನಂತರ ಪೊಲೀಸರು ಇಬ್ಬರನ್ನು ತಮ್ಮ ವಶಕ್ಕೆ ಪಡೆದುಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ. ಇವರಿಬ್ಬರ ಜೊತೆ ಆತನ ಇಬ್ಬರು ಸ್ನೇಹಿತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.