ಮದ್ವೆಯಾಗಿ 14 ತಿಂಗಳಿಗೆ ಪತ್ನಿಯನ್ನು ಮನೆಯಿಂದ ಹೊರದಬ್ಬಿದ ಪೊಲೀಸ್ ಪತಿ

Public TV
1 Min Read
bly husband wife collage copy

ಬಳ್ಳಾರಿ: ಪೊಲೀಸ್ ಪೇದೆ ವರ್ಷಕ್ಕೊಂದು ಮದುವೆಯಾಗುವುದ್ದಕ್ಕೆ, ಮದುವೆಯಾಗಿ 14ನೇ ತಿಂಗಳಿಗೆ ತನ್ನ ಮೊದಲ ಗರ್ಭಿಣಿ ಪತ್ನಿಗೆ ಕೊಡಬಾರದ ಕಾಟ ಕೊಟ್ಟು ಈಗ ವರದಕ್ಷಿಣೆ ತೆಗದುಕೊಂಡು ಬಾ ಎಂದು ಮನೆಯಿಂದ ಹೊರಹಾಕಿದ ಪ್ರಕರಣವೊಂದು ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ.

ಬಳ್ಳಾರಿಯ ಕೌಲಬಜಾರ ಪೊಲೀಸ್ ಠಾಣೆಯಲ್ಲಿ ಕ್ರೈಂ ಪೇದೆಯಾಗಿರುವ ಮೆಹಬೂಬ್ ಬಾಷಾ ಕಳೆದ 14 ತಿಂಗಳ ತಿಂದೆಯಷ್ಟೇ ನಸೀಮಾ ಅವರನ್ನು ಮದುವೆಯಾಗಿದ್ದ. ಆದರೆ ಮದುವೆಯಾದ ನಂತರ ಕೇವಲ 2 ತಿಂಗಳು ಮಾತ್ರ ಪತ್ನಿಯೊಂದಿಗೆ ಸಂಸಾರ ಮಾಡಿದ್ದಾನೆ. ಆದರೆ ಇದೀಗ ಪತ್ನಿಗೆ ಕೊಡಬಾರದ ಕಾಟ ಕೊಟ್ಟು ವರದಕ್ಷಿಣೆ ತರುವಂತೆ ಗರ್ಭಿಣಿ ಪತ್ನಿಯನ್ನು ಮನೆಯಿಂದ ಹೊರಹಾಕಿದ್ದಾನೆ.

vlcsnap 2018 09 27 15h55m01s308

ಪೇದೆ ಮೆಹಬೂಬ್ ಬಾಷಾ ಮದುವೆಯ ವೇಳೆ 3 ಲಕ್ಷ ಹಣ ಹಾಗೂ ಬಂಗಾರವನ್ನು ವರದಕ್ಷಿಣೆಯಾಗಿ ಪಡೆದಿದ್ದ. ಇದೀಗ ಮತ್ತೆ 2 ಲಕ್ಷ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದಾನೆ. ಪೇದೆ ಮೆಹಬೂಬ್ ಬಾಷಾರ ತಾಯಿ ಹಾಗೂ ಅವರ ಸೋದರ ಮಾವ ಸಹ ವರದಕ್ಷಿಣೆ ತರುವಂತೆ ಪೀಡಿಸುತ್ತಾ ಹಲ್ಲೆ ಮಾಡಿದ್ದಾರೆ. ಪತಿ ಈಗ ಮೂರು ತಿಂಗಳ ಗರ್ಭಿಣಿಯಾಗಿರುವ ನನ್ನನ್ನು ಮನೆಯಿಂದಲೇ ಹೊರಹಾಕಿ ವರದಕ್ಷಿಣೆಗಾಗಿ ಮತ್ತೊಂದು ಮದುವೆಯಾಗಲು ಸಜ್ಜಾಗಿದ್ದಾನೆ ಎಂದು ನಸೀಮಾ ಆರೋಪಿಸಿದ್ದಾರೆ.

ಪೇದೆಯ ಕಿರುಕುಳಕ್ಕೆ ಬೇಸತ್ತ ನಸೀಮಾ ಇದೀಗ ಬಳ್ಳಾರಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *