ಬೆಂಗಳೂರು: ನಡುರಸ್ತೆಯಲ್ಲೇ ಪತ್ನಿಗೆ ಗುಂಡಿಟ್ಟು ಕೊಂದ ಪತಿ, ಬಿಹಾರ ಮೂಲದ ವ್ಯಕ್ತಿಯಿಂದ 80 ಸಾವಿರಕ್ಕೆ ಗನ್ ಖರೀದಿ ಮಾಡಿದ್ದ ಎಂಬ ವಿಚಾರ ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಪತ್ನಿಗೆ ಗನ್‌ನಿಂದ ಐದು ಸುತ್ತು ಗುಂಡು ಹಾರಿಸಿ ಕೊಲೆ ಮಾಡಿ ಮಾಗಡಿ ರೋಡ್ ಪೊಲೀಸ್ ಠಾಣೆಗೆ ಹೋಗಿ ಪತಿ ಆರೋಪಿ ಬಾಲಮುರಗನ್ ಸರೆಂಡರ್ ಆಗಿದ್ದ. ಆರೋಪಿ ವಿರುದ್ಧ ಕೊಲೆ ಕೇಸ್ ದಾಖಲಿಸಿಕೊಂಡಿದ್ದ ಮಾಗಡಿ ರೋಡ್ ಪೊಲೀಸರು ಕಸ್ಟಡಿಗೆ ಪಡೆದು ವಿಚಾಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಪತ್ನಿಯನ್ನ ಆರೋಪಿ ಬಾಲ ಮುರಗನ್ ಹತ್ಯೆ ಮಾಡಿದ್ದು, ಯಾಕೆ ಮತ್ತು ಹತ್ಯೆ ಮಾಡಿದ ಗನ್ ಎಲ್ಲಿಯದ್ದು ಎಂಬ ವಿಚಾರವನ್ನು ಬಾಯಿಬಿಟ್ಟಿದ್ದಾನೆ. ಇದನ್ನೂ ಓದಿ: ಹುಲಿಕಲ್ ಘಾಟ್‌ನಲ್ಲಿ ಧರೆಗೆ ಬಸ್ ಡಿಕ್ಕಿ: ಮಗು ಸಾವು, ಮೂವರಿಗೆ ಗಂಭೀರ ಗಾಯ
ಪತ್ನಿಯ ಹತ್ಯೆ ಮಾಡುವುದಕ್ಕೆ ಅಂತಲೇ ಗನ್ ಖರೀದಿ ಮಾಡಿದ್ದಾನೆ. 80 ಸಾವಿರ ಹಣ ಕೊಟ್ಟು ಗನ್ ಖರೀದಿ ಮಾಡಿರುವುದು ತಿಳಿದು ಬಂದಿದೆ. ಹೇಗೆ ಮತ್ತು ಯಾರ ಬಳಿ ಖರೀದಿ ಮಾಡಿದ್ದಾನೆ ಎಂಬುದನ್ನ ಕೂಡ ಪೊಲೀಸರು ಆರೋಪಿಯಿಂದ ತಿಳಿದುಕೊಂಡಿದ್ದಾರೆ. ಪತ್ನಿಯನ್ನ ಮುಗಿಸಲೇಬೇಕೆಂದು ತೀರ್ಮಾನಿಸಿ ಆನ್‌ಲೈನ್‌ನಲ್ಲಿ ಗನ್ ಬಗ್ಗೆ ಮಾಹಿತಿಗಾಗಿ ತಡಕಾಡಿದ್ದ. ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವುದರಿಂದ ಡಾರ್ಕ್ ವೆಬ್ ಮುಖಾಂತರ ಗನ್ ತರಿಸಿಕೊಳ್ಳಲು ಪ್ಲ್ಯಾನ್ ಮಾಡಿದ್ದ.
ಮೂರನೇ ವ್ಯಕ್ತಿಯಿಂದ ಬಿಹಾರ ಮೂಲದ ವ್ಯಕ್ತಿಯನ್ನು ಆರೋಪಿ ಸಂಪರ್ಕಿಸಿದ್ದ. ಬಿಹಾರ ಮೂಲದ ವ್ಯಕ್ತಿಯಿಂದ ಗನ್ ತರಿಸಿಕೊಂಡಿರುವ ಬಗ್ಗೆ ಪೊಲೀಸರಿಗೆ ಆರೋಪಿ ಬಾಲ ಮುರಗನ್ ಹೇಳಿಕೊಂಡಿದ್ದಾನೆಂದು ತಿಳಿದು ಬಂದಿದೆ. ತಿಂಗಳುಗಳ ಪ್ರಯತ್ನದ ಬಳಿಕ ಗನ್ ತನಗೆ ಸಿಕ್ಕಿದ್ದಾಗಿ ಆರೋಪಿಯು ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ. ಪೊಲೀಸರು ಅಷ್ಟಕ್ಕೆ ಸುಮ್ಮನಾಗದೆ ಗನ್ ಕೊಟ್ಟವನ ಮಾಹಿತಿ ಕಲೆ ಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ. ಗನ್ ಕೊಟ್ಟ ವ್ಯಕ್ತಿ ಪತ್ತೆ ಹಚ್ಚಿದರೆ ಅಕ್ರಮ ಗನ್ ಮಾರಾಟ ಮಾಡುವ ಜಾಲವನ್ನ ಬಲೆಗೆ ಬಿಳಿಸಬಹುದೆಂದು ಪೊಲೀಸರು ತನಿಖೆಗೆ ಇಳಿದಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಶಬರಿಮಲೆ ಚಿನ್ನ ಕಳ್ಳತನ ಕೇಸ್ – SITಗೆ ಹೆಚ್ಚುವರಿ ಇಬ್ಬರು ಅಧಿಕಾರಿಗಳ ಸೇರ್ಪಡೆಗೆ ಕೇರಳ ಹೈಕೋರ್ಟ್ ಅನುಮತಿ

