– ಪತಿ ಸಾವು, ಹೆಂಡತಿಯ ಸ್ಥಿತಿ ಗಂಭೀರ
ತುಮಕೂರು: ಕುಡಿಯಲು ಹಣ ನೀಡಿಲ್ಲವೆಂದು ಕುಡುಕ ಪತಿಯೊಬ್ಬ ತಾನು ಬೆಂಕಿ ಹಚ್ಚಿಕೊಂಡು ಪತ್ನಿಯನ್ನು ತಬ್ಬಿಕೊಂಡ ಘಟನೆಯೊಂದು ಕೊರಟಗರೆ ತಾಲೂಕಿನ ಕರೇ ದುಗ್ಗನಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.
ಪತಿ ಲೋಕೇಶ್(40) ಮೃತಪಟ್ಟಿದ್ದು, ಪತ್ನಿ ಮರಿಬಸಮ್ಮ(38) ಸ್ಥಿತಿ ಗಂಭೀರವಾಗಿದೆ. ಪತಿ ಲೋಕೇಶ್ ಕುಡಿಯಲು ಹಣ ಕೊಡುವಂತೆ ಪತ್ನಿಯನ್ನು ನಿತ್ಯ ಪೀಡಿಸುತ್ತಿದ್ದನು. ಹಾಗೆಯೇ ಭಾನುವಾರ ಕೂಡ ಕುಡಿಯೋಕೆ ಪತ್ನಿ ಬಳಿ ಹಣ ಕೇಳಿದ್ದನು. ಪತ್ನಿ ಹಣ ನೀಡಲು ನಿರಾಕರಿಸಿದ್ದಕ್ಕೆ ಲೋಕೇಶ್ ಜಗಳವಾಡಿದ್ದನು.
Advertisement
ಲೋಕೇಶ್ ಸೀಮೆ ಎಣ್ಣೆ ಸುರಿದುಕೊಂಡು ತನಗೆ ತಾನೇ ಬೆಂಕಿ ಹಚ್ಚಿಕೊಂಡಿದ್ದಾನೆ. ಬಳಿಕ ಉರಿಯುವ ಬೆಂಕಿಯೊಂದಿಗೆ ಪತ್ನಿಯನ್ನು ತಬ್ಬಿಕೊಂಡಿದ್ದಾನೆ. ಈ ಘಟನೆಯಲ್ಲಿ ಗಂಭೀರ ಗಾಯಗೊಂಡ ಮರಿಬಸಮ್ಮಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
ಸದ್ಯ ಈ ಬಗ್ಗೆ ಕೋಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.