ಭೂಪಾಲ್: ಮಧ್ಯಪ್ರದೇಶದ ಬಿಜೆಪಿ ಶಾಸಕಿಯೊಬ್ಬರ ಪತಿ ಟೋಲ್ ಪ್ಲಾಜಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ರತ್ಲಂ ಜಿಲ್ಲೆಯ ಅಗ್ರಹವಾ ಎಂಬಲ್ಲಿ ನಡೆದಿದೆ.
ಸೈಲನಾ ಕ್ಷೇತ್ರದ ಶಾಸಕಿ ಸಂಗೀತಾ ಅವರ ಪತಿ ವಿಜಯ್ ಚಾರ್ಲೆ ಟೋಲ್ ಪ್ಲಾಜಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ವಿಜಯ್ ನೇರವಾಗಿ ಪ್ಲಾಜಾ ಒಳಗಡೆ ಬಂದು ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿರುವ ದೃಶ್ಯಾವಳಿಗಳು ಸಿಸಿಟಿವಿ ಯಲ್ಲಿ ಸೆರೆಯಾಗಿವೆ.
ನಡೆದಿದ್ದೇನು?: ಗುರುವಾರ ರಾತ್ರಿ 11 ಗಂಟೆಗೆ ಟೋಲ್ ಪ್ಲಾಜಾ ಬಳಿ ವಿಜಯ್ ಚಾರ್ಲೆ ತಮ್ಮ ಸಹಚರರೊಂದಿಗೆ ಆಗಮಿಸಿದ್ದಾರೆ. ಈ ವೇಳೆ ವಿಜಯ್ ಅವರನ್ನು ಟೋಲ್ ಪ್ಲಾಜಾ ಸಿಬ್ಬಂದಿ ತಡೆದಿದ್ದಾರೆ. ಇದರಿಂದ ಕೋಪಗೊಂಡು ಪ್ಲಾಜಾ ಒಳಗಡೆ ಬಂದು ಹಲ್ಲೆ ಮಾಡಿ, ನಂತರ ಘಟನಾ ಸ್ಥಳದಿಂದ ವಿಜಯ್ ಪರಾರಿಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ನಮ್ಮ ವಾಹನದ ಚಾಲಕ ಮತ್ತು ಟೋಲ್ ಸಿಬ್ಬಂದಿ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿತ್ತು. ಇಬ್ಬರ ಜಗಳವನ್ನು ಬಗೆಹರಿಸಲು ನಾನು ಕಾರಿನಿಂದ ಇಳಿದು ಪ್ಲಾಜಾ ಒಳಗಡೆ ಹೋಗಿದ್ದೆ, ಆದರೆ ಅಲ್ಲಿ ನಾನು ಯಾರ ಮೇಲೂ ಹಲ್ಲೆ ನಡೆಸಿಲ್ಲ ಎಂದು ವಿಜಯ್ ಚಾರ್ಲೆ ಘಟನೆ ಕುರಿತು ಹೇಳಿಕೆ ನೀಡಿದ್ದಾರೆ.
#CCTV Madhya Pradesh: Husband of BJP MLA Sangeeta Charel and his aides thrash toll plaza employee in Ratlam pic.twitter.com/QHucKYLTW9
— ANI (@ANI) October 28, 2017