CrimeDistrictsKarnatakaLatestMain PostUttara Kannada

ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ಕಟುಕ ಪತಿ!

ಕಾರವಾರ: ಕಟುಕ ಪತಿ ಮಹಾಶಯನೊಬ್ಬ ಮಚ್ಚಿನಿಂದ ಕೊಚ್ಚಿ ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಘಟನೆ ಕಾರವಾರದಲ್ಲಿ ನಡೆದಿದೆ.

ಮಂಜುಳಾ ಚನ್ನಯ್ಯ (46) ಕೊಲೆಯಾದ ದುರ್ದೈವಿ. ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೆಗ್ಗೋಡ್ಮನೆಯಲ್ಲಿ ನಡೆದಿದೆ. ದಾಂಪತ್ಯ ಕಲಹದಿಂದ ಪತಿ ಮಂಜುನಾಥ ಚನ್ನಯ್ಯ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಪೊಲೀಸರ ಮುಂದೆ ಶರಣಾಗಲು ಹೆಚ್ಚಿನ ಸಮಯ ಕೇಳಿದ ಸಿಧು

ಇಬ್ಬರ ಸಂಸಾರದಲ್ಲಿ ಕಲಹ ಉಂಟಾಗಿದ್ದು, ಈ ವೇಳೆ ಸಿಟ್ಟುಗೊಂಡ ಪತಿ, ಮಂಜುಳಾಳನ್ನು ಮಚ್ಚಿನಿಂದ ಕೊಚ್ಚಿದ್ದಾನೆ. ಆಕೆ ಮೃತಪಟ್ಟ ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಸದ್ಯ ಪರಾರಿಯಾದ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

 

Leave a Reply

Your email address will not be published.

Back to top button