ಮಂಡ್ಯ: ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ್ದ ಪತ್ನಿ, ಆಕೆಯ ಪ್ರಿಯತಮನಿಗೆ (Lovers) ಜೀವಾವಧಿ ಶಿಕ್ಷೆ ವಿಧಿಸಿ ಶ್ರೀರಂಗಪಟ್ಟಣದ 3ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (Mandya Session Court) ತೀರ್ಪು ಪ್ರಕಟಿಸಿದೆ.
ಕೆ.ಆರ್ ಪೇಟೆ (KR Pete) ತಾಲ್ಲೂಕು ಅಕ್ಕಿಹೆಬ್ಬಾಳು ಗ್ರಾಮದ ನಾಸಿರ್ ಪಾಷಾನನ್ನು ಆತನ ಹೆಂಡತಿ ಅಂಜುಮ್ ಆರಾ ಹಾಗೂ ಆಕೆಯ ಪ್ರಿಯಕರ ರಹೀಂಖಾನ್‌ನನ್ನು ಕೊಲೆ ಮಾಡಿದ್ದರು. ಈ ಬಗ್ಗೆ 2021 ನವೆಂಬರ್ 26 ರಂದು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: Champions Trophy | ಯಾವ ವರ್ಷ – ಯಾರು ಚಾಂಪಿಯನ್ಸ್? – ಭಾರತ ಕೊನೇ ಬಾರಿ ಟ್ರೋಫಿ ಗೆದ್ದಿದ್ದು ಯಾವಾಗ?
Advertisement
Advertisement
ಠಾಣಾಯೆ ಇನ್ಸ್‌ಪೆಕ್ಟರ್ ಕೆ.ಎಸ್ ನಿರಂಜನ್ ಅವರು ಈ ಸಂಬಂಧ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದರು. ವಿಚಾರಣೆ ಮುಗಿದ ಬಳಿಕ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ಕೋರ್ಟ್ ಆರೋಪ ಸಾಬೀತಾದ ಹಿನ್ನೆಲೆ ನ್ಯಾಯಾಧೀಶರಾದ ಗೋಪಾಲಕೃಷ್ಣ ರೈ ಅವರಿದ್ದ ಪೀಠ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
Advertisement
ಅಲ್ಲದೇ ಮೊದಲ ಆರೋಪಿ ಅಂಜುಮ್ ಆರಾಗೆ 10,000 ರೂ. ದಂಡ ಹಾಗೂ 3ನೇ ಆರೋಪಿ ರಹೀಂ ಖಾನ್ ಗೆ 15,000 ದಂಡ ವಿಧಿಸಿದೆ. ಈ ಪ್ರಕರಣದಲ್ಲಿ ಅಂಜುಮ್ ಆರಾಳ ಪ್ರಿಯತಮನಾಗಿರುವ 2ನೇ ಆರೋಪಿ ತಲೆಮರೆಸಿಕೊಂಡಿದ್ದಾನೆಂದು ತಿಳಿದು ಬಂದಿದೆ. ಇದನ್ನೂ ಓದಿ: ಕಲಬುರಗಿ ಜಿಲ್ಲಾಡಳಿತದಿಂದ ಉದ್ಯೋಗ ಮೇಳ – 189 ಜನರಿಗೆ ಸ್ಥಳದಲ್ಲೇ ನೇಮಕಾತಿ
Advertisement
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪ್ರಫುಲ್ಲ ಎಂ.ಕೆ ವಾದ ಮಂಡಿಸಿದ್ದರು. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಈ ಕಾರ್ಯವನ್ನು ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ವರ್ತೂರ್ ಪ್ರಕಾಶ್ ಹೆಸರಲ್ಲಿ ಶ್ವೇತಾಗೌಡ ವಂಚನೆ ಕೇಸ್ – 2.1 ಕೆಜಿ ಚಿನ್ನಾಭರಣದ ಮೂಲ ಪತ್ತೆ