-ಶವ ಸಾಗಿಸಲು ಅಳಿಯನಿಗೆ ಮಾವನಿಂದಲೇ ಸಾಥ್
ಮಂಡ್ಯ: ಪರಪುರುಷರೊಂದಿಗೆ ಅನೈತಿಕ ಸಂಬಂಧ (Immoral Relationship) ಹೊಂದಿರುವ ಶಂಕೆಯ ಮೇಲೆ ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನೇ (Wife) ಗಂಡ (Husband) ಕೊಲೆ ಮಾಡಿದ ಘಟನೆ ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಮಂಡ್ಯಕೊಪ್ಪಲು ಗ್ರಾಮದಲ್ಲಿ ನಡೆದಿದೆ.
- Advertisement3
ಪೂಜಾ (26) ಪತಿಯಿಂದ ಕೊಲೆಯಾದ ಮಹಿಳೆಯಾಗಿದ್ದು, ಶ್ರೀನಾಥ್ (33) ವೇಲ್‌ನಿಂದ ತನ್ನ ಪತ್ನಿಯ ಕುತ್ತಿಗೆ ಬಿಗಿದು ಕೊಲೆಗೈದಿದ್ದಾನೆ. ಪೂಜಾ ಹಾಗೂ ಶ್ರೀನಾಥ್ 9 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿಗೆ ಒಂದು ಹೆಣ್ಣುಮಗು ಇದೆ. ಕಳೆದ ಕೆಲವು ವರ್ಷಗಳಿಂದ ಪೂಜಾ ಟಿಕ್‌ಟಾಕ್ (TikTok) ಗೀಳು ಬೆಳೆಸಿಕೊಂಡಿದ್ದಳು. ರೀಲ್ಸ್ (Reels) ಮಾಡುವ ಜೊತೆಗೆ ಸ್ನೇಹಿತರೊಂದಿಗೆ ಚಾಟಿಂಗ್ ಹುಚ್ಚನ್ನೂ ಬೆಳೆಸಿಕೊಂಡಿದ್ದಳು. ಅತಿಯಾದ ಮೊಬೈಲ್ ಬಳಕೆಯಿಂದಾಗಿ ಗಂಡನಿಗೆ ಅನುಮಾನ ಶುರುವಾಗಿದ್ದು, ದಂಪತಿ ಮಧ್ಯೆ ಪದೇ ಪದೇ ಜಳವಾಗುತ್ತಿತ್ತು. ಇದನ್ನೂ ಓದಿ: ಟಿವಿ ನೋಡ್ತಿದ್ದ ವೇಳೆ ಹೃದಯಾಘಾತದಿಂದ ಉಪನ್ಯಾಸಕ ಸಾವು
- Advertisement
ಪರಪುಷರೊಂದಿಗೆ ಸಂಬಂಧದ ಶಂಕೆಯಿಂದ ಜಗಳ ತೆಗೆಯುತ್ತಿದ್ದ ಶ್ರೀನಾಥ್ ಪೂಜಾಳ ಕುತ್ತಿಗೆಗೆ ವೇಲ್‌ನಿಂದ ಬಿಗಿದು ಹತ್ಯೆಮಾಡಿದ್ದಾನೆ. ಕೊಲೆಗೈದ ಬಳಿಕ ಶ್ರೀನಾಥ್ ಮಾವ ಶೇಖರ್‌ಗೆ ಕರೆ ಮಾಡಿ ಕೊಲೆ ಮಾಡಿರುವುದಾಗಿ ಹೇಳಿದ್ದು, ಮಗಳ ಹತ್ಯೆಯ ಬಗ್ಗೆ ತಿಳಿದರೂ ಮಾವ ಪೊಲೀಸರಿಗೆ ಹೇಳದೆ ಅಳಿಯನಿಗೆ ಸಾಥ್ ನೀಡಿದ್ದಾರೆ. ಪೂಜಾಳ ತಂದೆ ಅಳಿಯನೊಂದಿಗೆ ಸೇರಿ ಆಕೆಯ ಮೃತದೇಹವನ್ನು ಮನೆಯಿಂದ ಬೈಕ್‌ನಲ್ಲಿ ಸಾಗಿಸಿ ಬಳಿಕ ಮೃತದೇಹಕ್ಕೆ ಭಾರವಾದ ಕಲ್ಲನ್ನು ಕಟ್ಟಿ ಕಾವೇರಿ ನದಿಗೆ (Kaveri River) ಎಸೆದಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಅಪ್ರಾಪ್ತೆಯರ ಅಶ್ಲೀಲ ವೀಡಿಯೋ ಅಪ್ಲೋಡ್ – ಆರೋಪಿ ಅರೆಸ್ಟ್
ಪತ್ನಿಯನ್ನು ಕೊಲೆಗೈದು ಶ್ರೀನಾಥ್ ಮನೆಯಲ್ಲಿಯೇ ಇದ್ದ. ಮಗಳ ಶವವನ್ನು ನದಿಗೆಸೆದ ಬಳಿಕ ಮಾವ ರಾಜಶೇಖರ್ ಹೊಟೇಲ್ ಕೆಲಸದಲ್ಲಿ ತೊಡಗಿದ್ದ. ಶ್ರೀನಾಥ್ ನಿಮಿಷಾಂಬ ದೇವಸ್ಥಾನಕ್ಕೆ ಹೋಗಿಬರುವುದಾಗಿ ತೆರಳಿದ್ದು, ದೇವರ ದರ್ಶನದ ಬಳಿಕ ಪೊಲೀಸರಿಗೆ ಕರೆ ಮಾಡಿ ಶರಣಾಗಿದ್ದಾನೆ. ಅಲ್ಲದೇ ಶವ ಸಾಗಿಸಲು ಸಾಥ್ ನೀಡಿದ ಮಾವನ ಬಗ್ಗೆಯೂ ಪೊಲೀಸರಿಗೆ ಮಾಹಿತಿ ನೀಡಿದ್ದು, ಸದ್ಯ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಅರಕೆರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಪಾರ್ಟ್‍ಮೆಂಟ್ ಹೊರಗೆ ನಡೆದುಕೊಂಡು ಹೋಗ್ತಿದ್ದ ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ
Web Stories