ಚಿಕ್ಕಬಳ್ಳಾಪುರ: ವ್ಯಕ್ತಿಯೋರ್ವ ಕುಡಿಯಲು ಹಣ ನೀಡಲಿಲ್ಲವೆಂದು ಪತ್ನಿಗೆ (Wife) ಅನೈತಿಕ ಸಂಬಂಧವಿದೆ ಎಂದು ಆರೋಪಿಸಿ ಆಕೆಯನ್ನು ಮನಸ್ಸೋ ಇಚ್ಛೆ ಹೊಡೆದು ಕೊಂಡು ಹಾಕಿದ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಚಿಕ್ಕದಿಬ್ಬೂರ ಹಳ್ಳಿಯಲ್ಲಿ ನಡೆದಿದೆ.
ಗಾಯತ್ರಿ (39) ಮೃತ ಮಹಿಳೆಯಾಗಿದ್ದು, ಅಶ್ವತ್ಥಪ್ಪ ಕೊಲೆ ಮಾಡಿದ ಆರೋಪಿ. ಗಾಯತ್ರಿ ಹಾಗೂ ಅಶ್ವತ್ಥಪ್ಪನಿಗೆ ಮದುವೆಯಾಗಿ 20 ವರ್ಷ ಕಳೆದಿದ್ದು, ಅವರಿಗೆ 18 ವಷದ ಮಗಳು ಹಾಗೂ 14 ವರ್ಷದ ಮಗನಿದ್ದಾನೆ. ಆದರೆ ಅಶ್ವತ್ಥಪ್ಪ ಪ್ರತಿದಿನ ಕುಡಿದು ಬಂದು ಹೆಂಡತಿ ಹಾಗೂ ಮಕ್ಕಳಿಗೆ ಹೊಡೆಯುವುದನ್ನು ಮಾಡುತ್ತಿದ್ದ. ಇದರಿಂದಾಗಿ ಬೇಸತ್ತ ಪತ್ನಿ ಗಾಯತ್ರಿ ಹಾಗೂ ಮಕ್ಕಳು ಪ್ರತಿನಿತ್ಯ ಅಶ್ವತ್ಥಪ್ಪನಿಂದ ತಪ್ಪಿಸಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೇ ಮಕ್ಕಳನ್ನು ರಾತ್ರಿಯಾದ ಮೇಲೆ ಸಂಬಂಧಿಗಳ ಮನೆಗೆ ಕಳುಹಿಸುತ್ತಿದ್ದಳು. ಜೊತೆಗೆ ಹಣವಿಲ್ಲ ಮಗ ಶಾಲೆ ಬಿಟ್ಟು ಗ್ಯಾರೆಜ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ.
Advertisement
Advertisement
ಆದರೆ ಗುರುವಾರ ಮನೆಗೆ ಬಂದ ಅಶ್ವತ್ಥಪ್ಪ ಕುಡಿಯಲು ಪತ್ನಿ ಬಳಿ ಹಣ (Money) ಕೇಳಿದ್ದಾನೆ. ಆದರೆ ಈ ವೇಳೆ ಗಾಯತ್ರಿ ಹಣವನ್ನು ನೀಡುವುದಿಲ್ಲ ಎಂದು ತಿಳಿಸಿದ್ದಾಳೆ. ಇದರಿಂದಾಗಿ ಆಕೆ ಅನೈತಿಕ ಸಂಬಂಧವನ್ನು ಹೊಂದಿದ್ದಾಳೆ ಎಂದು ಶಂಕಿಸಿದ ಅಶ್ವತ್ಥಪ್ಪ ಆಕೆಗೆ ದೊಣ್ಣೆ ಹಾಗೂ ಮಾರಕಾಸ್ತ್ರಗಳಿಂದ ಹೊಡೆದಿದ್ದಾನೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ಗಾಯತ್ರಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಬಾಬುರಾವ್ ಚಿಂಚನಸೂರ್ ಅಲ್ಲ, ಚಂಚಲ ಸೂರ: ರವಿಕುಮಾರ್
Advertisement
Advertisement
ಘಟನೆಗೆ ಸಂಬಂಧಿಸಿ ದಿಬ್ಬೂರಹಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಶ್ವತ್ಥಪ್ಪನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಮೃತಳ ಸಂಬಂಧಿಕರು ಮಾತನಾಡಿ , ಕುಡಿಯುವುದಕ್ಕೆ ಹಣ ಇಲ್ಲವೆಂದರೆ ಅಶ್ವತ್ಥಪ್ಪ ತವರು ಮನೆಯಿಂದ ಒಡವೆ ಹಣ ಗಾಯತ್ರಿಗೆ ಹಿಂಸೆ ನೀಡುತ್ತಿದ್ದ. ಈಗ ಸ್ವತಃ ಪತ್ನಿಯನ್ನು ಹೊಡೆದು ಸಾಯಿಸಿದ್ದಾನೆ, ಅವನನ್ನು ಸುಮ್ಮನೆ ಬೀಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಧೂಳಿಪಟವಾಗಲಿದೆ: ಬಾಬುರಾವ್ ಚಿಂಚನಸೂರ್